Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಲಾರಿ; ಸಾವಿರಾರು ಜನರ ಪರದಾಟ

ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ  ಮಂಗಳವಾರ ನಸುಕಿನ 1 ಗಂಟೆಯ ವೇಳೆಗೆ ಲಾರಿಯೊಂದು ನಡುರಸ್ತೆಯಲ್ಲೇ ಕೆಟ್ಟು ನಿಂತ ಪರಿಣಾಮ ಸಾವಿರಾರು ವಾಹನ ಸವಾರರು ಟ್ರಾಫಿಕ್‌ ಜಾಮ್‌ಗೆ ಸಿಲುಕಿ ಪರದಾಡಬೇಕಾಯಿತು.

ಘಾಟಿಯ ಆರಂಭದಿಂದ ಸುಮಾರು 10 ಕಿ.ಮೀ ವರೆಗೆ ವಾಹನಗಳು ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿತು.

ರಾತ್ರಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ,ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಬಸ್‌ಗಳ ಸಾವಿರಾರು ಪ್ರಯಾಣಿಕರು ಬೆಳಗ್ಗೆ  8ಗಂಟೆಯ ವರೆಗೆ ನಿಂತಲ್ಲೆ ನಿಂತು ಪರದಾಡಬೇಕಾಯಿತು.

ಬೆಳಗ್ಗೆ ಬರಬೇಕಾದ ಬಸ್‌ಗಳು ಇನ್ನೂ ಉಡುಪಿ, ಮಂಗಳೂರನ್ನು ತಲುಪಿಲ್ಲ.

ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬುಲೆನ್ಸ್‌ ಸಿಲುಕಿಕೊಂಡು ಪರದಾಡಬೇಕಾಯಿತು.

ಪೊಲೀಸರು ಸ್ಥಳಕ್ಕಾಗಮಿಸಿ ಲಾರಿ ತೆರವುಗೊಳಿಸಿದ್ದು, ಸಂಚಾರ ಮತ್ತೆ ಆರಂಭವಾಗಿದೆ. ಭಾರೀ ಸಂಖ್ಯೆಯ ವಾಹನಗಳಿರುವ ಕಾರಣ ಸಂಚಾರ ನಿಧಾನ ಗತಿಯಲ್ಲಿ ಸಾಗುತ್ತಿದೆ.

ನಿಷೇಧ ಹೇರಿದ ನಡುವೆಯೂ ಬೃಹತ್‌ ಲಾರಿಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುತ್ತಿವೆ.

No Comments

Leave A Comment