Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಏಷ್ಯಾಡ್ ಶೂಟಿಂಗ್ ನಲ್ಲಿ 15ರ ಹರೆಯದ ವಿಹಾನ್ ಮುಡಿಗೆ ಬೆಳ್ಳಿ ಪದಕ

ಪಾಲೆಂಬಾಗ್ : 18 ನೇ ಏಶ್ಯನ್ ಗೇಮ್ಸ್ ನಲ್ಲಿ ಗುರುವಾರ ಭಾರತಕ್ಕೆ ಎರಡನೇ ಪದಕ ದಕ್ಕಿದೆ. ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ 15ರ ಹರೆಯದ ಶಾರ್ದೂಲ್ ವಿಹಾನ್ ಬೆಳ್ಳಿ ಪದಕ ಗೆದ್ದಿದ್ದಾರೆ. 
ಉತ್ತರ ಪ್ರದೇಶ ಮೂಲದ ವಿಹಾನ್ 73 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೊರಿಯಾದ ಶಿನ್ ಹುನ್ವೊ 74 ಅಂಕಗಳೊಂದಿಗೆ ಬಂಗಾರ ಪದಕ ಪಡೆದರು.

ವಿಹಾನ್ ಶಾರ್ದೂಲ್ ಕಳೆದ ವರ್ಷ ನಡೆದಿದ್ದ ಶೂಟ್ ಗನ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ 4 ಬಂಗಾರ ಗೆದ್ದಿದ್ದರು. ಏಶ್ಯನ್ ಗೇಮ್ಸ್ನಲ್ಲಿ ಎರಡು ಪದಕ ಗೆದ್ದಿದ್ದ ಶೂಟರ್ ಅನ್ವರ್ ಸುಲ್ತಾನ್ ಅವರ ಬಳಿ ವಿಹಾನ್ ತರಬೇತಿ ಪಡೆಯುತ್ತಿದ್ದಾರೆ.

ವಿಹಾನ್ ಶಾರ್ದೂಲ್ ಸಾಧನೆಗೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, ಒಲಿಂಪಿಕ್ಸ್ ಪದಕ ವಿಜೇತ ಅಭಿನವ್ ಬಿಂದ್ರಾ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.

No Comments

Leave A Comment