Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ತೆಕ್ಕಟ್ಟೆ; ಲಾರಿ ಪಲ್ಟಿ, ಪಾಮ್ ಆಯಿಲ್ ಪ್ಯಾಕೇಟ್ ಗೆ ಮುಗಿಬಿದ್ದ ಜನರು

ತೆಕ್ಕಟ್ಟೆ: ಓವರ್ ಟೇಕ್ ಮಾಡುವ ಭರದಲ್ಲಿ ಬಸ್ಸೊಂದು ಪಾಮ್ ಆಯಿಲ್ ತುಂಬಿದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾದ ಘಟನೆ ಬುಧವಾರ ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪೆಟ್ರೋಲ್  ಪಂಪ್ ಬಳಿ ನಡೆದಿದೆ.

ಘಟನೆಯಿಂದ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಪಾಮ್ ಆಯಿಲ್ ರಸ್ತೆಯ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟಸಂಭವಿಸಿದೆ.

ಮಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಖಾಸಗಿ ಬಸ್ಸು, ಹುಬ್ಬಳ್ಳಿಗೆ ಖಾಸಗಿ ಕಂಪೆನಿಯ ಪಾಮ್ ಆಯಿಲ್ ಸಾಗಿಸುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.  ಇದರಿಂದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡದ ಬಸ್ ಕಂಪೆನಿಯ ವಿರುದ್ದ ಆಕ್ರೋಶ  ವ್ಯಕ್ತಪಡಿಸಿದ್ದರು. ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರಿಂದ  ಪಾಮ್ ಆಯಿಲ್ ಖಾಲಿ 
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪಾಮ್ ಆಯಿಲ್ ಗುರುವಾರ ಬೆಳಿಗ್ಗೆ ಅಕ್ಷರಶಃ ಖಾಲಿಯಾಗಿದೆ. ಸ್ಥಳೀಯರು ಬಾಕ್ಸ್ ನಲ್ಲಿ ಪಾಮ್ ಆಯಿಲ್‌ಗಳನ್ನು ತಾ ಮುಂದುನಾ ಮುಂದು ಎಂಬಂತೆ  ತಮ್ಮ ತಮ್ಮ ಮನೆಗೆ ಕೊಂಡೊಯ್ಯುತ್ತಿದ್ದಾರೆ.

No Comments

Leave A Comment