Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಮುಂಬಯಿ ಕ್ರೈಸ್ಟಲ್‌ ಟವರ್‌ನಲ್ಲಿ ಭಾರಿ ಬೆಂಕಿ;ಕನಿಷ್ಠ 4 ಮಂದಿ ಬಲಿ

ಮುಂಬಯಿ: ಇಲ್ಲಿನ ಪರೇಲ್‌ ಪ್ರದೇಶದಲ್ಲಿರುವ ಬಹುಮಹಡಿ ಕ್ರೈಸ್ಟಲ್‌ ಟವರ್‌ನ ಲ್ಲಿ  ಬುಧವಾರ ಬೆಳಗ್ಗೆ  ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ನಾಲ್ಕು ಮಂದಿ ಸಜೀವವಾಗಿ ದಹನಗೊಂಡಿದ್ದಾರೆ. 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ 20 ಕ್ಕೂ ಅಗ್ನಿ ಶಾಮಕ ವಾಹನಗಳೊಂದಿಗೆ ಸಿಬಂದಿಗಳು ದೌಡಾಯಿಸಿದ್ದು ಬೆಂಕಿ ನಂದಿಸಿ ಸಿಲುಕಿಕೊಂಡಿರುವವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಟ್ಟಡದೊಳಗೆ ಇನ್ನೂ ಕೆಲವರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯ ಸಾಗಿದೆ.

12 ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಗೆ 13 , 14 ಮತ್ತು 15 ನೇ ಮಹಡಿಗೂ ವ್ಯಾಪಿಸಿರುವ ಬಗ್ಗೆ ವರದಿಯಾಗಿದೆ.

No Comments

Leave A Comment