Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಕೇರಳ ಪ್ರವಾಹ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ ರೂ. ದೇಣಿಗೆ ನೀಡಿದ್ರು ಕಾಲಿವುಡ್ ಸ್ಟಾರ್

ತಿರುವನಂತಪುರಂ: ದೇವರನಾಡು ಕೇರಳ ಪ್ರವಾಹ ಪರಿಸ್ಥಿತಿಯಲ್ಲಿ ಸಾಕಷ್ಟು ಜನರು ನೆಲೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದು, ಕಾಲಿವುಡ್ ನಟ ವಿಜಯ್ ಬರೋಬ್ಬರಿ 14 ಕೋಟಿ ರೂ. ನೀಡಿದ್ದಾರೆ.

ಕೇವಲ ವಿಜಯ್ ಮಾತ್ರವಲ್ಲದೇ ಕಳೆದ ಹಲವು ದಿನಗಳಿಂದ ಹಲವು ಸಿನಿಮಾ ನಟರು ನೆರವು ನೀಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಸದ್ಯ ವಿಜಯ್ ನೀಡಿದಷ್ಟು ದೊಡ್ಡ ಮೊತ್ತವನ್ನು ಬೇರೆ ಯಾವ ನಟರು ನೀಡಿಲ್ಲ ಎಂಬುವುದು ಗಮನಾರ್ಹವಾಗಿದೆ.

ಸಿನಿಮಾ ಕ್ಷೇತ್ರದಲ್ಲಿ ಕೇರಳ ಪ್ರವಾಹ ನಿಧಿಗೆ ಟಾಲಿವುಡ್ ನ ರಾಮ್‍ಚರಣ್ ತೇಜ (60 ಲಕ್ಷ ರೂ., ಔಷಧಿ, ಆಹಾರ), ರಾಮ್ ಚರಣ್ ಪತ್ನಿ ಉಪಾಸನಾ (1.2ಕೋಟಿ ರೂ.), ಪ್ರಭಾಸ್ (1 ಕೋಟಿ ರೂ.) ಹಾಗೂ ಕಾಲಿವುಡ್ ನಟ ಸೂರ್ಯ ಮತ್ತು ಕಾರ್ತೀ(35 ಲಕ್ಷ ರೂ.), ಅಲ್ಲು ಅರ್ಜುನ್ (25 ಲಕ್ಷ ರೂ.) ನೀಡಿದ್ದಾರೆ.

ಇನ್ನು ಕೇರಳಕ್ಕೆ ಕರ್ನಾಟಕ ಸರ್ಕಾರ ಸೇರಿದಂತೆ ಓಡಿಶಾ, ದೆಹಲಿ, ಪಂಜಾಬ್ ಹಾಗೂ ಹರಿಯಾಣ ರಾಜ್ಯ ಸರ್ಕಾರಗಳು ತಲಾ ಕೋಟಿ ರೂ. ನೆರವು ನೀಡಿವೆ.

No Comments

Leave A Comment