Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ನಗರ ಸಭೆ ಚುನಾವಣೆ:ತೆ೦ಕಪೇಟೆ-ಒಳಕಾಡಿನ ಬಿ ಜೆ ಪಿ ಅಭ್ಯರ್ಥಿಗಳಿ೦ದ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಮಪತ್ರ ಸಲ್ಲಿಕೆ

ಉಡುಪಿ ನಗರ ಸಭೆ ಚುನಾವಣೆಗೆ ತೆ೦ಕಪೇಟೆಹಾಗೂ ಒಳಕಾಡಿನನಿ೦ದ ಸ್ಪರ್ಧಿಸಲಿರುವ ಬಿ ಜೆ ಪಿ ಅಭ್ಯರ್ಥಿಗಳಾದ ಮಾನಸ ಸಿ ಪೈ ಮತ್ತು ರಜನಿ ಹೆಬ್ಬಾರ್ ಅಭ್ಯರ್ಥಿಗಳಿ೦ದ ಗುರುವಾರ (ಇ೦ದು) ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮುಖಾ೦ತರ ನಗರ ಸಭೆಗೆ ತೆರಳಿ ನಾಮಪತ್ರ ಸಲ್ಲಿಸಲಾಯಿತು.

ನಗರಸಭೆಯ ತೆ೦ಕಪೇಟೆ ವಾರ್ಡಿನ ಮಾಜಿ ಸದಸ್ಯರಾದ ಶ್ಯಾಮ್ ಕುಡ್ವ,ಚಿದಾನ೦ದ ಪೈ, ಶ್ರೀಮತಿ ಶೀಲಾ ಕೆ ಶೆಟ್ಟಿ ಹಾಗೂ ಪಕ್ಷದ ಮುಖ೦ಡರು ಹಾಗೂ ಅಭಿಮಾನಿಗಳು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment