Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಗಣೇಶ ಮೂರ್ತಿ ಬಳಿ ಶೂ ಧರಿಸಿ ಫೋಟೋಗೆ ಫೋಸ್, ಬಿಗ್‌ಬಾಸ್ ಸ್ಪರ್ಧಿ ಹೀನಾ ಖಾನ್ ಟ್ರೋಲ್!

ಸದಾ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಗೆ ತುತ್ತಾಗುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಹೀನಾ ಖಾನ್ ಇದೀಗ ಮತ್ತೊಮ್ಮೆ ಟ್ವೀಟರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹಾಟ್ ಬೆಡಗಿ ಹೀನಾ ತನ್ನ ಬಾಯ್ ಫ್ರೆಂಡ್ ರಾಕಿ ಜೈಸ್ವಾಲ್ ಜತೆ ನಾಸಿಕ್ ಗೆ ತೆರಳಿದ್ದರು. ಅಲ್ಲಿಯೇ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಒಂದು ವಿಡಿಯೋದಲ್ಲಿ ಹೀನಾ ಖಾನ್ ಯಡವಟ್ಟು ಮಾಡಿಕೊಂಡಿದ್ದಾರೆ. ಶೂ ಹಾಕಿಕೊಂಡೆ ಗಣೇಶ ಮೂರ್ತಿ ಬಳಿ ನಿಂತು ಫೋಟೋ ಕ್ಲಿಕ್ಕಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇನ್ನು ಹೀನಾ ಖಾನ್ ರನ್ನು ನೆಟಿಜನ್ ಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಹೀನಾ ಖಾನ್ ತಿರುಗೇಟು ನೀಡಿದ್ದು ಅದೇ ಗಣೇಶನ ವಿಗ್ರಹದ ಮುಂದೆ ಚಪ್ಪಲಿ ಧರಿಸಿ ಜನರು ತಿರುಗಾಡುತ್ತಿರುವ ವಿಡಿಯೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಸಾಕಷ್ಟು ಜನರು ತಿರುಗಾಡುತ್ತಿದ್ದಾರೆ. ಇದು ದೇವಸ್ಥಾನವಲ್ಲ ಎಂದು ಬರೆದುಕೊಂಡಿದ್ದಾರೆ.

No Comments

Leave A Comment