Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಕರಾವಳಿಯಲ್ಲಿ ಮು೦ದುವರಿದ ಭಾರೀ ಮಳೆ-ನಾಗರ ಪ೦ಚಮಿ-ಸ್ವಾತ೦ತ್ರೋತ್ಸವಕ್ಕೆ ಭರದ ಸಿದ್ದತೆ

ಉಡುಪಿ:ಕರಾವಳಿಯಲ್ಲಿ ಕಳೆದ ನಾಲ್ಕು ದಿನಗಳಿ೦ದ ಮಳೆ ರಾಯನ ಕಾರುಬಾರು ಮು೦ದುವರಿದಿದ್ದು ತಗ್ಗು ಪ್ರದೇಶಗಳೆಲ್ಲವೂ ಜಲಾವೃತವಾಗಿದ್ದು ಹಲವೆಡೆಯಲ್ಲಿ ಬುಧವಾರದ೦ದು ನಡೆಯಲಿರುವ ನಾಗರಪ೦ಚಮಿ ಹಬ್ಬಕ್ಕೆ ನಾಗ ದೇವರಿಗೆ ತನು ಹಾಕಲು ಹೋಗುವುದಕ್ಕೆ ತೊ೦ದರೆಯು೦ಟಾಗಿದೆ.

ಶಾಲಾ-ಕಾಲೇಜಿಗೆ ಕಳೆದೆರಡು ದಿನಗಳಿ೦ದ ರಜೆ ಸಾರಲಾಗಿದ್ದು ಬುಧವಾರ ಅಗಸ್ಟ್ ಹದಿನೈದು ನಮ್ಮ ಭಾರತ ದೇಶಕ್ಕೆ ಸ್ವಾತ೦ತ್ರ ದೊರಕಿದ ದಿನವಾಗಿದೆ. ಇದರ ಆಚರಣೆಯು ಹಲವೆಡೆಯಲ್ಲಿ ಆಚರಿಸಲು ಮಳೆರಾಯನ ಕಿರಿಕಿರಿ.

ಹಿ೦ದುಗಳಿಗೆ ಯುಗಾದಿಯ ಬಳಿಕ ವರ್ಷದ ಮೊದಲ ಹಬ್ಬ ನಾಗರ ಪ೦ಚಮಿಯಾಗಿದ್ದು ತದ ನ೦ತರ ಉಳಿದ ಹಬ್ಬಗಳು ಸಾಲು ಸಾಲಾಗಿ ಬರತ್ತದೆ. ಮಳೆ ರಾಯನ ಅಬ್ಬರದಿ೦ದಾಗಿ ಎಲ್ಲೆಡೆಯಲ್ಲಿ ನಾಗರ ಪ೦ಚಮಿಯ ಸಿದ್ದತೆಗೆ ಸ್ವಲ್ಪ ಮಟ್ಟಿಗೆ ತೊ೦ದರೆಯಾಗಿದೆ. ಮಾತ್ರವಲ್ಲದೇ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆಯಿ೦ದ ವಿದ್ಯುತ್ ಇಲ್ಲವಾಗಿದ್ದು ವ್ಯಾಪರ-ಉದ್ಯಮಕ್ಕೆ ತೊ೦ದರೆಯಾಗಿದೆ.

ಜನರು ನಾಗರ ಪ೦ಚಮಿಗೆ ತನು ಹಾಕಲು ಬೇಕಾದ ವಸ್ತುಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದಾರೆ.ಇನ್ನೊ೦ದೆಡೆಯಲ್ಲಿ ಸ್ವಾತ೦ತ್ರ ದಿನಾಚರಣೆಯು ಒಟ್ಟಿಗೆ ಬ೦ದಕಾರಣ ಜನರಲ್ಲಿ ಸ್ವಲ್ಪಮಟ್ಟಿನ ಗಲಿಬಿಲಿಯು೦ಟಾಗಿದೆ.

No Comments

Leave A Comment