Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೈನಾದಲ್ಲಿ ಕನ್ನಡಿಗರ ಮನೆತೆರವಿಗೆ ಸಿದ್ಧತೆ

ಪಣಜಿ: ಗೋವಾದ ಬೈನಾದಲ್ಲಿರುವ ಅಕ್ರಮ ಗುಡಿಸಲುಗಳ ವಿರುದ್ಧ ಕ್ರಮ ಕೈಗೊಳ್ಳಲು ಗೋವಾ ಕರಾವಳಿ ವಲಯ ಪ್ರಾಧಿಕಾರಕ್ಕೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ಬೈನಾ ಬೀಚ್‌ನಲ್ಲಿರುವ ಮನೆಗಳು ಅಕ್ರಮ ಎಂದು ಹಸಿರು ಪೀಠ ಹೇಳಿದೆ. ಇದರಿಂದಾಗಿ ಮತ್ತೆ ಬೈನಾ ಆಪರೇಷನ್‌ ಕಾರ್ಯಾಚರಣೆ ನಡೆಯುವ ಆತಂಕ ಎದುರಾಗಿದೆ.

ಗೋವಾ ಸರ್ಕಾರವು ಬೈನಾದಲ್ಲಿರುವ ಮನೆಗಳು ಅಕ್ರಮ, ಈ ಮನೆಗಳನ್ನು ತೆರವುಗೊಳಿಸುವು ದಾಗಿ ನೋಟಿಸ್‌ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೈನಾ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಾದ, ಪ್ರತಿವಾದ ಪರಿಶೀಲಿಸಿದ ನಂತರ ರಾಷ್ಟ್ರೀಯ ಹಸಿರು ಪೀಠವು ಬೈನಾದಲ್ಲಿ ಯಾವುದೇ ಮನೆಗಳ ನಿರ್ಮಾಣದ ಸಂದರ್ಭದಲ್ಲಿ ಪೂರ್ವ ಪರವಾನಗಿ ಪಡೆದುಕೊಂಡಿಲ್ಲ, ಮನೆಗಳ ನಿರ್ಮಾಣ ಕಾನೂನು ಬಾಹಿರ ಎಂದು ಕಂಡು ಬಂದಿದೆ ಎಂದು ಹೇಳಿದೆ.

No Comments

Leave A Comment