Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಉಡುಪಿ: ಶ್ರೀ ಪಾದನುಗ್ರಹ ಪ್ರಶಸ್ತಿ ಪ್ರದಾನ

ಉಡುಪಿ:ಉಡುಪಿಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಅಭಿಮಾನಿ ಶಿಷ್ಯರು ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಿದ 7ನೇ ವರ್ಷದ ಯಕ್ಷಗಾನ ಮತ್ತು “ಶ್ರೀ ಪಾದನುಗ್ರಹ ಪ್ರಶಸ್ತಿ ಪ್ರದಾನ” ಕಾರ್ಯಕ್ರಮದಲ್ಲಿ ಉಡುಪಿಯ ಹಿರಿಯ ತಾಂತ್ರಿಕ ತಜ್ಞರಾದ ಯು.ಕೆ.ರಾಘವೇಂದ್ರ ರಾವ್ ಮತ್ತು ವಾಸುದೇವ ಭಟ್ ಶಿವಪುರ ಇವರನ್ನು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸನ್ಮಾನಿಸಿ ಮಾತನಾಡುತ್ತಾ ಜನರ ಮನಸ್ಸಿಗೆ ಆನಂದ,ಸಂತೋಷ ಕೊಡುವಂತ ಸಂಸ್ಕಾರಯುತ ಯಾವುದೇ ಭಾರತೀಯ ಕಲೆಯು ದೇವರ ಪೂಜೆ ಮಾಡುವ ಇನ್ನೊಂದು ವಿಧಾನವಾಗಿರುತ್ತದೆ.ನಮ್ಮ ಕರಾವಳಿಯ ಗಂಡು ಕಲೆಯಾದ ಯಕ್ಷಗಾನದಲ್ಲಿ ಕಲಾವಿದರು ತಮ್ಮನ್ನು ತೊಡಗಿಸಿಕೊಂಡು ಕಲೆಯನ್ನು ಆರಾಧನೆ ಮಾಡುತ್ತಾರೆ.ಉಡುಪಿಯ ಸರಳ ಸಜ್ಜನಿಕೆಯ ಹಿರಿಯ ತಾಂತ್ರಿಕ ತಜ್ಞ ಹಾಗೂ ಅದಮಾರು ಮೂಲ ಮಠದಲ್ಲಿ ಹಲವಾರು ವರ್ಷಗಳಿಂದ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ, ಇವರಿಬ್ಬರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅವರು ಸಮಾಜದಲ್ಲಿ ಮಾಡಿದ ಸಾಧನೆಗೆ ಸಂದ ಗೌರವ ಆಗಿರುತ್ತದೆ. ನಮ್ಮ ಅಭಿಮಾನಿ ಮೂವರು ಶಿಷ್ಯರು ಜನ್ಮಾಂತರದ ವಿಶೇಷ ಫಲದಿಂದ ಭಗವಂತನ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಇವರಿಂದ ನಿರಂತರ ಇಂತಹ ಸೇವೆಯನ್ನು ನಡೆಸುವಂತಾಗಲಿ ಎಂದು ಅನುಗ್ರಹ ಸಂದೇಶ ನೀಡಿದರು.

ಅಭಿಮಾನಿ ಶಿಷ್ಯರೊಬ್ಬರಲ್ಲಾದ ಗೋವಿಂದರಾಜ್ ಸ್ವಾಗತಿಸಿ ಸನ್ಮಾನ ಪತ್ರ ವಾಚಿಸಿದರು.ವಾಸುದೇವ ರಂಗ ಭಟ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.

No Comments

Leave A Comment