Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಲ್ಲಾಳ: ಖಾಸಗಿ ಬಸ್‌ಗೆ ಸರಕಾರಿ ಬಸ್ ಡಿಕ್ಕಿ-15 ಮಂದಿಗೆ ಗಾಯ

ಉಲ್ಲಾಳ: ನಿಂತಿದ್ದ ಖಾಸಗಿ ಬಸ್ಸಿಗೆ ಹಿಂದಿನಿಂದ ಬಂದ ಕೆಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಅಡ್ಕ ಬಳಿ  ಶನಿವಾರ ಮಧ್ಯಾಹ್ನ  ನಡೆದಿದೆ.

ಕೊಣಾಜೆಯಿಂದ ಮಾಡೂರು ಮಾರ್ಗವಾಗಿ ಮಂಗಳೂರಿನ ಕೊಟ್ಟಾರಕ್ಕೆ ಸಂಚರಿಸುವ ಬಸ್ಸು ಅಡ್ಕ ಬಳಿ ಜನರನ್ನು ಇಳಿಸಲು ನಿಂತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಲಾರಿಯೊಂದನ್ನು ಓವರ್ ಟೇಕ್ ಮಾಡಿ ಬಂದ ಕಾಸರಗೋಡು ನಿಂದ ಮಂಗಳೂರಿಗೆ ಸಂಚರಿಸುವ ಸರಕಾರಿ ಬಸ್ಸು ಹಿಂದಿನಿಂದ  ಡಿಕ್ಕಿ ಹೊಡೆದಿದೆ.

 


ಅಪಘಾತದ ರಭಸಕ್ಕೆ ಎರಡೂ ಬಸ್ಸುಗಳು ನಜ್ಜುಗುಜ್ಜಾಗಿವೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಲ್ಲಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

No Comments

Leave A Comment