Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಇಶಾಂತ್ ಶರ್ಮಾ ಮಾರಕ ಬೌಲಿಂಗ್ ಗೆ ಇಂಗ್ಲೆಡ್ ತತ್ತರ: 180 ಕ್ಕೆ ಸರ್ವಪತನ, ಭಾರತಕ್ಕೆ 194 ರನ್ ಗುರಿ

ಲಂಡನ್: ಇಂಗ್ಲೆಂಡ್- ಭಾರತ ನಡುವಿನ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ನ 2 ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ  180 ಕ್ಕೆ ಸರ್ವಪತನ ಕಂಡಿದ್ದು  ಭಾರತಕ್ಕೆ 194 ರನ್ ಗಳ ಗುರಿ ನೀಡಿದೆ.
3 ನೇ ದಿನದ ಆಟದಲ್ಲಿ ಭಾರತ ಇಂಗ್ಲೆಂಡ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಇಶಾಂತ್ ಶರ್ಮಾ ಮಾರಕ ಬೌಲಿಂಗ್ ಗೆ ಇಂಗ್ಲೆಂಡ್ ಆಟಗಾರರು ತತ್ತರಿಸಿದರು.  13 ಓವರ್ ಗಳಲ್ಲಿ 51 ರನ್ ನೀಡಿದ ಇಶಾಂತ್ ಶರ್ಮಾ ಬರೊಬ್ಬರಿ 5 ವಿಕೆಟ್ ತೆಗೆದು ಯಶಸ್ವಿ ಬೌಲರ್ ಎನಿಸಿದರು. ಇನ್ನು ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದು 21 ಓವರ್ ಗಳಲ್ಲಿ 59 ರನ್ ಗಳನ್ನು ನೀಡಿದರೆ, 7 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಗಳಿಸಿದರು.
ಸ್ಯಾಮ್ ಕ್ಯುರನ್( 65ಎಸೆತಗಳಲ್ಲಿ 63 ರನ್ ) 2 ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, ಉಳಿದೆಲ್ಲಾ ಆಟಗಾರರು 30 ರನ್ ಗಳಿಗಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗದೇ ಪೆವಿಲಿಯನ್ ಪರೇಡ್ ನಡೆಸಿದರು. ಭಾರತ ಬ್ಯಾಟಿಂಗ್ ಆರಂಭಿಸಿದ್ದು ಇತ್ತೀಚಿನ ವರದಿ ಪ್ರಕಾರ ವಿಕೆಟ್ ನಷ್ಟವಿಲ್ಲದೇ 9 ರನ್ ಗಳಿಸಿದೆ.
No Comments

Leave A Comment