Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ನೋಜೊಮಿ ಒಕುಹರಾ ಮಣಿಸಿದ ಪಿವಿ ಸಿಂಧು ಸೆಮಿ ಫೈನಲ್ಸ್ ಗೆ

ನಾನ್ಜಿಂಗ್: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಿ.ವಿ ಸಿಂಧು ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಮಣಿಸಿದ್ದು ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
ನೋಜೊಮಿ ಒಕುಹರಾ  ಅವರ ವಿರುದ್ಧ 2017 ರ ವಿಶ್ವ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯದಲ್ಲಿ ಸಿಂಧು ಸೋಲನ್ನನುಭವಿಸಿದ್ದರು.  2018 ರ ಕ್ವಾರ್ಟರ್ ಫೈನಲ್ ನಲ್ಲಿ  21-17, 21-19 ಸೆಟ್ ಗಳ ಅಂತರದಿಂದ ಸಿಂಧು ನೋಜೊಮಿ ಒಕುಹರಾ ಅವರನ್ನು ಮಣಿಸಿದ್ದು, ಫೈನಲ್ಸ್ ಪ್ರವೇಶಿಸಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಪಿ.ವಿ ಸಿಂಧು ಹಿನ್ನಡೆ ಎದುರಿಸಿದರಾದರೂ ನಂತರದ ಭಾಗದಲ್ಲಿ 11-10 ರ ಮುನ್ನಡೆ ಸಾಧಿಸಿದರು. ಈ  ನಂತರ ಮುನ್ನಡೆಯನ್ನು ಬಿಟ್ಟುಕೊಡದ ಸಿಂಧು, 21-17, 21-19 ಸೆಟ್ ಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿದ್ದಾರೆ.
No Comments

Leave A Comment