Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಮಾಲೂರು ವಿದ್ಯಾರ್ಥಿನಿ ಹತ್ಯೆ ಪ್ರಕರಣ: ರೇಖಾಚಿತ್ರ ಆಧರಿಸಿ ತನಿಖೆ, ಆರೋಪಿ ಬಂಧನ

ಕೋಲಾರ: ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದಿದ್ದ 10ನೇ ತರಗತಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣದ ಆರೊಪಿಯನ್ನು ಬಂಧಿಸುವಲ್ಲಿ ಮಾಲೂರು ಪೋಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ರಂಜಿತ್‌ (22) ಎಂದು ಗುರುತಿಸಲಾಗಿದ್ದು ಈತ ಸಹ ಮಾಲೂರಿನ ನಿವಾಸಿಯಾಗಿದ್ದಾನೆ.ಇವನು ಮೃತ ಬಾಲಕಿಯ ಮನೆ ಸಮೀಪವೇ ಗಾರೆ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿಯ ರೇಖಾಚಿತ್ರದ ಆಧಾರದಲ್ಲಿ ರಂಜಿತ್ ಬಂಧನವಾಗಿದ್ದು ಕೊಲೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಸಧ್ಯ ರಂಜಿತ್ ನನ್ನು ಇಂದು ನ್ಯಾಯಾಲೆಯದೆದುರು ಹಾಜರುಪಡಿಸಲು ಪೋಲೀಸರು ನಿರ್ಧರಿಸಿದ್ದಾರೆ.
ಘಟನಾ ವಿವರ
ಬುಧವಾರ ಹೋಬಳಿ ಮಟ್ಟದ ಕ್ರೀಡಾಕೂಟ ಮುಗಿಸಿ ಮನೆಗೆ ತೆರಳುತ್ತಿದ್ದ 1 ಬಿಜೆಎಸ್‌ ಶಾಲೆಯ0ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿದ ದುಷ್ಕರ್ಮಿಗಳು ಮಾಲೂರು  ರೈಲ್ವೇ ಅಂಡರ್ ಪಾಸ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದರು. ಮೊಂಡು ಆಯುಧದಿಂದ ವಿದ್ಯಾರ್ಥಿನಿಯ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು.
ಅಂದು ಬೆಳಿಗ್ಗೆ ಆಕೆಯ ತಂದೆ ಶಾಲೆಗೆ ಡ್ರಾಪ್ ಮಾಡಿದ್ದರು ಹತ್ಯೆಗೆ ಮುನ್ನ ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿತ್ತು.
ಆರೋಪಿಯ ಬಂಧನಕ್ಕೆ ಆಗ್ರಹಿಸಿ ಮಾಲೂರು ಸೇರಿದಂತೆ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಮಾಲೂರಿನಲ್ಲಿ  ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರು.
No Comments

Leave A Comment