Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಗ್ರ ಕೃತ್ಯ: ಅಫ್ಘಾನಿಸ್ತಾನದಲ್ಲಿ ಕಾರವಾರ ಮೂಲದ ವ್ಯಕ್ತಿ ಸೇರಿ ಮೂವರ ಹತ್ಯೆ

ಕಾರವಾರ/ಕಾಬೂಲ್:  ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಭಯೋತ್ಪಾದಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ಮೂಲದ ವ್ಯಕ್ತಿಯೂ ಸೇರಿದಂತೆ ಮೂವರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.

ಗುರುವಾರ ನಡೆದಿದ್ದ ಘಟನೆಯಲ್ಲಿ ಕಾರವಾರ ತಾಲೂಕು ಕಡವಾಡ ಗ್ರಾಮದ ಪ್ಯಾಟ್ಸನ್​ (34) ಭಯೋತ್ಪಾದಕರಿಂದ ಹತ್ಯೆಗೀಡಾಗಿದ್ದಾರೆ. ಇವರು ಕಾಬುಲ್​ ನಲ್ಲಿನ ವಿಶ್ವದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಫುಡ್ ಮತ್ತು ಕ್ಯಾಟರಿಂಗ್ ಸರ್ವಿಸ್ ಸಂಸ್ಥೆ ಸಾಡೆಕ್ಸೋ  ದಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು ಕಳೆದ 10 ವರ್ಷಗಳಿಂದ ಅವರು ಇಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಪ್ಯಾಟ್ಸನ್ ಜತೆಗೆ ಭಯೋತ್ಪಾದಕರು ಓರ್ವ ಮಲೇಶಿಯಾ ಪ್ರಜೆ ಹಾಗು ಮ್ಯಾಸಿಡೋನಿಯಾ ಪ್ರಜೆಯನ್ನು ಸಹ ಅಪಹರಣ ಮಾಡಿ ಕೊಲೆ ಮಾಡಿದ್ದಾರೆ. ಗುರುವಾರ ಕೆಲಸದ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ಮೂವರನ್ನೂ ಭಯೋತ್ಪಾದಕರು ಕಾರು ಸಮೇತವಾಗಿ ಅಪಹರಿಸಿದ್ದರು. ಪಾರ್ಕಿಂಗ್ ಏರಿಯಾ ಒಂದರಲ್ಲಿ ಕಾರು ನಿಲ್ಲಿಸಿದ್ದ ಅವರು ಕಾರ್ ನಲ್ಲಿಯೇ ಮೂವರನ್ನೂ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಕಾಬುಲ್​ ಪ್ರಾಂತ್ಯದ ಮುಸ್ಸಹಿ ಜಿಲ್ಲೆಯಲ್ಲಿ ಕಾರಿನಲ್ಲಿದ್ದ ಮೃತದೇಹಗಳು ಪತ್ತೆಯಾಗಿದೆ. ವಿಶೇಷವೆಂದರೆ ಭಯೋತ್ಪಾದಕರು ಕಾರು ಚಾಲಕನಿಗೆ ಯಾವುದೇ ಅಪಾಯ ಮಾಡಿಲ್ಲ. ಇದೀಗ ಅಫ್ಘಾನ್ ಸೇನಾ ಪಡೆ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಸ್ಥಳದಲ್ಲಿ ಮೂವರು ನಾಗರಿಕರ ಗುರುತಿನ ಚೀಟಿ ದೊರಕಿದ್ದು ಇದರಿಂದ ಮೃತರ ಗುರುತು ಪತ್ತೆಯಾಗಿದೆ. ಶವಗಳನ್ನು ಪರೀಕ್ಷೆ ನಡೆಸಿದ ಬಳಿಕ ಇನ್ನೆರಡು ದಿನಗಳಲ್ಲಿ ಅವರವರ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

No Comments

Leave A Comment