Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಹೈದರಾಬಾದ್‌ : ನಕಲಿ ಉದ್ಯೋಗ ಜಾಲ ಬಯಲು: 8 ಬಂಧನ, 24 ಲಕ್ಷ ರೂ. ವಶ

ಹೈದರಾಬಾದ್‌ : ನಕಲಿ ಉದ್ಯೋಗ ಜಾಲವೊಂದನ್ನು ಭೇದಿಸಿರುವ ಹೈದರಾಬಾದ್‌ ಪೊಲೀಸರು ಎರಡು ಗ್ಯಾಂಗ್‌ ಗಳಿಗೆ ಸೇರಿದ ಒಟ್ಟು ಎಂಟು ಮಂದಿಯನ್ನು ಬಂಧಿಸಿ ಅವರಲ್ಲಿದ್ದ  24 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ನಕಲಿ ಉದ್ಯೋಗ ಜಾಲದವರು ಸುಮಾರು 150 ನಿರುದ್ಯೋಗಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ  ಉದ್ಯೋಗ ದೊರಕಿಸುವ ಆಮಿಷ ಒಡ್ಡಿ ಅವರಿಂದ ತಲಾ 1ರಿಂದ 10 ಲಕ್ಷ ರೂ. ಹಣವನ್ನು ಲೂಟಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಉದ್ಯೋಗ ಜಾಲದ ಖದೀಮರು ತಮ್ಮ ಬಲಿಪಶುಗಳಿಗೆ ನಕಲಿ ನೇಮಕಾತಿ ಮತ್ತು ತರಬೇತಿ ಪತ್ರಗಳನ್ನು ನೀಡಿ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment