Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪೈಲೆಟ್ ಅನಾರೋಗ್ಯ:ದುಬೈ ವಿಮಾನ ನಿಲ್ದಾಣದಲ್ಲಿ ಬಾಕಿ

ಮಂಗಳೂರು, ಅ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ ಬೆಟೆಗೆ ಹೊರಡಬೇಕಿದ್ದ ಸ್ಮಸ್ ಜೆಟ್ ವಿಮಾನವು ಪೈಲೆಟ್ ಅನಾರೋಗ್ಯದ ಕಾರಣ ನನ್ನ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದೆ. ಇದರಿಂದ 188 ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಮಂಗಳೂರು- ದುಬೈ ನಡುವೆ ಸಜೆಟ್ ವಿಮಾನವು ನಿನ್ನೆ ತಡರಾತ್ರಿ 12:45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾನ ಅರಂಭಿಸಬೇಕಿತ್ತು. ಆದರೆ ಈ ಮಧ್ಯೆ ಪೈಲಟ್‌ಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ವಿಮಾನ ಯಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು.

ಇದರಿಂದ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ 188 ಪ್ರಯಾಣಿಕರು ವಿಮಾನ ನಿಲಾಣದಲ್ಲಿ ಉಳಿದು ಅತ೦ತ್ರರಾದರು. ಬಳಿಕ ಈ ಪ್ರಯಾಣಿಕರಿಗೆ ತ೦ಗಲು ಸ್ಪೈಸ್ ಜೆಟ್ ಸ೦ಸ್ಥೆಯು ಹೋಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಿದೆ.

ಈ ಮಂಗಳೂರು -ದುಬೈ ಸ್ಪೈಸ್ ಜೆಟ್ ವಿಮಾನವು ಭಾರೀ ತಡವಾಗಿ ಇ೦ದು ಸಂಜೆ ದುಬೈಗೆ ಪ್ರಯಾಣ ಬೆಳೆಸಲಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment