Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ದಿಲ್ಲಿ ಹೊಟೇಲಿಂದ ಗಲ್ಫ್ ಗೆ ಸಾಗಾಟ: 39 ನೇಪಾಲಿ ಹುಡುಗಿಯರ ರಕ್ಷಣೆ

ಹೊಸದಿಲ್ಲಿ : ದಿಲ್ಲಿ ಪೊಲೀಸ್‌ ಮತ್ತು ಮಹಿಳಾ ಆಯೋಗದ ಜಂಟಿ ತಂಡದವರು ಇಂದು ನಸುಕಿನ ವೇಳೆ ಪಹಾಡ್‌ಗಂಜ್‌ ಹೊಟೇಲ್‌ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ತಳ್ಳಲ್ಪಡಲಿದ್ದ ಕನಿಷ್ಠ 39 ನೇಪಾಲಿ ಹುಡುಗಿಯರನ್ನು ರಕ್ಷಿಸುವುದರೊಂದಿಗೆ ಬೃಹತ್‌ ಮಾನವ ಕಳ್ಳಸಾಗಣೆ ಜಾಲವನ್ನು ಬಯಲುಗೊಳಿಸಿದರು.

ಡಿಸಿಡಬ್ಲ್ಯು ಹೇಳಿಕೆ ಪ್ರಕಾರ ಮಾನವ ಕಳ್ಳಸಾಗಣೆ ವಿರುದ್ಧದ ಈ ಜಂಟಿ ಕಾರ್ಯಾಚರಣೆಯು ಇಂದು ನಸುಕಿನ 1 ಗಂಟೆಯಿಂದ ತೊಡಗಿ 6 ಗಂಟೆಯ ವರೆಗೆ ನಡೆಯಿತು.

ಪಹಾಡ್‌ಗಂಜ್‌ನ ಹೊಟೇಲ್‌ ಹೃದಯ್‌ ಇನ್‌ ಮೇಲೆ ನಡೆಸಲಾದ ದಾಳಿಯಲ್ಲಿ ಪಾರಾದ 39 ನೇಪಾಲಿ ಹುಡುಗಿಯರು ಕೊಲ್ಲಿ ದೇಶಕ್ಕೆ ಸಾಗಲ್ಪಡುವವರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment