Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಮ್ಯಾನ್‌ಮಾರ್‌: ಹರಳಿನ ಗಣಿಯಲ್ಲಿ ಭೂಕುಸಿತ; 27 ಕಾರ್ಮಿಕರ ಸಾವು

ಯಾಂಗೂನ್‌ : ಉತ್ತರ ಮ್ಯಾನ್‌ಮಾರ್‌ ನ ಪಚ್ಚೆ ಹರಳು ಗಣಿಯೊಂದರಲ್ಲಿ ಸಂಭವಿಸಿದ ಭೂಕುಸಿತಕ್ಕೆ 27 ಮಂದಿ ಬಲಿಯಾಗಿರುವುದಾಗಿ ಭೀತಿ ಪಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಣಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಗಣಿಯೊಳಗೆ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಮ್ಯಾನ್‌ಮಾರ್‌ನ ಕಚಿನ್‌ ರಾಜ್ಯದಲ್ಲಿನ ಅತ್ಯಂತ ದುರ್ಗಮ ಪ್ರದೇಶದಲ್ಲಿರುವ ಅಮೂಲ್ಯ ಹರಳಿನ ಗಣಿಗಳು ಬಿಲಿಯಗಟ್ಟಲೆ ಡಾಲರ್‌ಗಳ, ಭ್ರಷ್ಟಾಚಾರದಿಂದ ತುಂಬಿರುವ, ಉದ್ಯಮವಾಗಿದೆ. ಇಲ್ಲಿನ ಗಣಿಗಳಲ್ಲಿನ ಕಾರ್ಮಿಕ ಸುರಕ್ಷೆ ಅತ್ಯಂತ ಕಳಪೆಯಾಗಿವೆ.

ಈ ಗಣಿಗಳಲ್ಲಿ ಅತ್ಯಂತ ಬಡ ಜನಾಂಗೀಯ ಸಮುದಾಯದ ಕಾರ್ಮಿಕರು ದುಡಿಯುತ್ತಾರೆ ಮತ್ತು ಪದೇ ಪದೇ ಸಂಭವಿಸುವ ದುರಂತಗಳಿಗೆ ಬಲಿಯಾಗುತ್ತಿರುತ್ತಾರೆ ಎಂದು ವರದಿಗಳು ತಿಳಿಸಿವೆ.

No Comments

Leave A Comment