Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಭೀಕರ ಅಪಘಾತ: ಕಾರು ನಜ್ಜು ಗುಜ್ಜು;ವಿದ್ಯಾರ್ಥಿಗಳಿಬ್ಬರ ದುರ್ಮರಣ- ಹರಿನಾರಾಯಣ ಅಸ್ರಣ್ಣರ ಪುತ್ರ ಅವಘಡದಲ್ಲಿ ಬಲಿ

ಬೆಂಗಳೂರು /ಮಂಗಳೂರು: ತುಮಕೂರು ರಸ್ತೆಯ ನೆಲಮಂಗಲದ ತಾವರೆಕೆರೆ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯಣ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಸೇರಿದಂತೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರು ಶ್ರೀನಿಧಿ ಅಸ್ರಣ್ಣ(21)  ಮತ್ತು ಪ್ರಜ್ವಲ್‌(20)ಎನ್ನುವವರಾಗಿದ್ದಾರೆ. ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಇವರು ಇನ್ನಿಬ್ಬರು ಸ್ನೇಹಿತರೊಂದಿಗೆ ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಮೃತ ಶ್ರೀನಿಧಿ ಅಸ್ರಣ್ಣ

ಪ್ರಜ್ವಲ್‌ ತಮ್ಮನನ್ನು ತುಮಕೂರಿಗೆ ಬಿಟ್ಟು ವಾಪಾಸಾಗುತ್ತಿದ್ದ ವೇಳೆ ಅವಘಡ ನಡೆದಿದೆ.ನಾಲ್ವರಿದ್ದ ಕಾರು ಲಾರಿಯೊಂದಕ್ಕೆ ಢಿಕ್ಕಿಯಾಗಿ ಬಳಿಕ ಸರಕಾರಿ ಬಸ್‌ಗೆ ಢಿಕ್ಕಿಯಾಗಿ ಸಂಪೂರ್ಣ ನಜ್ಜುಗುಜ್ಜಾ ಗಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಕಾರಿನಲ್ಲಿದ್ದ ಶರತ್‌ ಭಂಡಾರಿ ಮತ್ತು ಶರತ್‌ ಉಡುಪ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಕಟೀಲಿನಲ್ಲಿ ವಿಚಾರ ತಿಳಿದು ನೀರವ ಮೌನ ಆವರಿಸಿದ್ದು, ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.

No Comments

Leave A Comment