Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕಾರಿನಲ್ಲಿದ್ದ ಇಬ್ಬರ ಸಜೀವ ದಹನ

ಆನೇಕಲ್‌: ಖಾಸಗಿ ಬಸ್ಸು ಮತ್ತು ಕಾರು ಮುಖಾಮುಖೀ ಡಿಕ್ಕಿಯಾದ ಪರಿಣಾಮ ಸಂಭವಿಸಿದ ಅಗ್ನಿ ದುರಂತದಲ್ಲಿ ಕಾರಿನಲ್ಲಿದ್ದ ಇ¬ಬ್ಬರು ಸಜೀವವಾಗಿ ದಹನಗೊಂಡ ಘಟನೆ ಆನೇಕಲ್‌ ತಾಲೂಕಿನ ಹೆನ್ನಾಗರ ಗೇಟ್‌ಬಳಿ ನಡೆದಿದೆ.

ಭಾನುವಾರ ಬೆಳಗ್ಗೆ 6 ಗಂಟೆಗೆ ಅವಗಡ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಸಬೀರ್‌ (35), ಇಸ್ಮಾಯಿಲ್‌ (38) ಸಜೀವವಾಗಿ ದಹನವಾಗಿದ್ದಾರೆ. ಇವರಿಬ್ಬರ ಹೊರತು ಕಾರಿನಲ್ಲಿ ಬೇರಾರು ಇರಲಿಲ್ಲ. ಹೀಗಾಗಿ ಮೃತರ ಮೂಲದ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಿಂದ ಹೊಸೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ವಿರುದ್ಧ ದಿಕ್ಕಿನ ರಸ್ತೆಗೆ ಉರುಳಿದೆ. ಈ ವೇಳೆ ಹೊಸೂರಿನಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಬಸ್ಸು ಕಾರಿಗೆ ಡಿಕ್ಕಿ ಹೊಡೆದಿದೆ. ವಾಹನಗಳ ನಡುವಿನ ಘರ್ಷಣೆಯಿಂದಾಗಿ ಕಾರು ಮತ್ತು ಬಸ್ಸು ಎರಡಕ್ಕೂ ಬೆಂಕಿ ಹತ್ತಿಕೊಂಡಿದೆ.

ಈ ವೇಳೆ ಬಸ್ಸಿನ ಒಳಗಿದ್ದ 19ಕ್ಕೂ ಹೆಚ್ಚು ಪ್ರಯಾಣಿಕರು ಕೂಡಲೇ ಕೆಳಗೆ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರಿಗೆ ತಗುಲಿದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಾರನ್ನು ವ್ಯಾಪಿಸಿಕೊಂಡ ಪರಿಣಾಮ ಸಬೀರ್‌ ಹಾಗೂ ಇಸ್ಮಾಯಿಲ್‌ ಹೊರಗೆ¬ಬರು ಸಾಧ್ಯವಾಗಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ದುರಂತದಲ್ಲಿ ಕಾರಿಗೆ ಮೊದಲು ಬೆಂಕಿ ಹತ್ತಿಕೊಂಡಿತು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಖಾಸಗಿ ಬಸ್ಸು ಬಹುತೇಕ ಸುಟ್ಟುಹೋಗಿದ್ದು, ಕಾರು ಸಂಪೂರ್ಣ ಭಸ್ಮವಾಗಿವೆ. ಹೀಗಾಗಿ ಕಾರಿನ ಸಂಖ್ಯೆ ಹಾಗೂ ಮೃತರ ಮೂಲ ಪತ್ತೆ ಮಾಡಲು ತಡವಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರೀನ್‌ಲೈನ್‌ ಟ್ರಾವೆಲ್ಸ್‌ ಬಸ್ಸು: ಘಟನೆ ಮಾಹಿತಿ ತಿಳಿಯುತಯ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೆ ಆ ವೇಳೆಗಾಗಲೇ ವಾಹನಗಳು ಸಂಪೂರ್ಣ ಸುಟ್ಟುಹೋಗಿದ್ದವು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ Óಸೂರ್ಯನಗರ ಠಾಣೆ ಪೊಲೀಸರು, ತನಿಖೆ ನಡೆಸಿದ್ದಾರೆ.

No Comments

Leave A Comment