Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಎಚ್‌ಸಿಎಲ್‌ ಅಧ್ಯಕ್ಷ ಶಿವ ನಾಡಾರ್‌: ತಿರುಪತಿ ತಿಮ್ಮಪ್ಪನಿಗೆ 1 ಕೋಟಿ

ತಿರುಪತಿ, ಆಂಧ್ರ ಪ್ರದೇಶ : ಪ್ರಖ್ಯಾತ ಟೆಕ್‌ ಕಂಪೆನಿಯಾಗಿರುವ ಎಚ್‌ಸಿಎಲ್‌ ಅಧ್ಯಕ್ಷ ಶಿವ ನಾಡಾರ್‌ ಅವರು ತಿರುಪತಿ ತಿರುಮಲೆಯ ಶ್ರೀ ವೆಂಕಟೇಶ್ವರ ದೇವರಿಗೆ ಒಂದು ಕೋಟಿ ರೂ. ಕಾಣಿಕೆಯನ್ನು ನೀಡಿದ್ದಾರೆ.

ನಾಡಾರ್‌ ಅವರು ನಿನ್ನೆ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಬಳಿಕ 1,00,00,001 ರೂ. ಡಿಮಾಂಡ್‌ ಡ್ರಾಫ್ಟ್ ಅನ್ನು ದೇವಸ್ಥಾನದ ಅಧಿಕಾರಿಗಳಿಗೆ ಕಾಣಿಕೆಯಾಗಿ ಅರ್ಪಿಸಿದರು ಎಂದು ಟಿಟಿಡಿ ಪಿಆರ್‌ಓ ಟಿ ರವಿ ತಿಳಿಸಿದ್ದಾರೆ.

ತನ್ನ ಈ ಕಾಣಿಕೆಯನ್ನು ದೇವಸ್ಥಾನವು ತಿರುಪತಿಯಲ್ಲಿ  ನಡೆಸುತ್ತಿರುವ ವಿಕಲಾಂಗರ ಆಸ್ಪತ್ರೆಗೆ ಬಳಸಬೇಕೆಂದು ನಾಡಾರ್‌ ದೇವಸ್ಥಾನದ ಅಧಿಕಾರಿಗಳಲ್ಲಿ ಕೋರಿದರು.

No Comments

Leave A Comment