Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

120 ಮಹಿಳೆಯರ ಮೇಲೆ ರೇಪ್‌ ; ಮತ್ತೋರ್ವ ಕಾಮುಕ ಬಾಬಾ ಅರೆಸ್ಟ್‌

ಫ‌ತೇಹಾಬಾದ್‌: ಹರಿಯಾಣದಲ್ಲಿ ನಡೆದ ಕಳವಳಕಾರಿ ವಿದ್ಯಮಾನವೊಂದರಲ್ಲಿ 120 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ವಿಕೃತಕಾಮಿ ಬಾಬಾನೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಬಾಬಾ ಅಮರ್‌ಪುರಿ ಎನ್ನುವಾತನಾಗಿದ್ದು ಫ‌ತೇಹಾಬಾದ್‌ನ ತೊಹಾನ ಪ್ರದೇಶದಲ್ಲಿರುವ ಬಾಲಕನಾಥ್‌ ದೇವಾಲಯದ ಮುಖ್ಯಸ್ಥನಾಗಿದ್ದ. ಈತ 120 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಎಸಗಿದ್ದು, ಕೃತ್ಯವನ್ನು ವಿಡಿಯೋ ಮಾಡಿ ವಿಕೃತ ಆನಂದ ಪಡುತ್ತಿದ್ದ ಎಂದು ತಿಳಿದು ಬಂದಿದೆ.

ಹೇಯ ಕೃತ್ಯದ ವಿಡಿಯೋಗಳು ವೈರಲ್‌ ಆದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಬಾನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

120 ವಿಡಿಯೋಗಳು ಲಭ್ಯವಾಗಿವೆ ಎಂದು ತಿಳಿದು ಬಂದಿದ್ದು ಪ್ರತೀ ವಿಡಿಯೋದಲ್ಲೂ ಬೇರೆ ಬೇರೆ ಮಹಿಳೆಯ ಜೊತೆ ಬಾಬಾ ಇರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.

No Comments

Leave A Comment