Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೆಂಗಳೂರು: ಬೌರಿಂಗ್ ಕ್ಲಬ್ ಸದಸ್ಯರ ಲಾಕರ್ ನಲ್ಲಿದ್ದ 550 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ವಶ!

ಬೆಂಗಳೂರು: ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ ಟಿಟ್ಯೂಟ್  ನ ಲಾಕರ್ ಗಳಲ್ಲಿ ಸದಸ್ಯರೊಬ್ಬರು ರಹಸ್ಯವಾಗಿ  ಇಟ್ಟಿದ್ದ ಸುಮಾರು 550 ಕೋಟಿ ರೂ. ಮೌಲ್ಯದ    ಚಿನ್ನಾಭರಣ, ಆಸ್ತಿಪಾಸ್ತಿ ದಾಖಲೆ ಪತ್ರಗಳನ್ನು  ಆದಾಯ ತೆರಿಗೆ ಇಲಾಖೆ ಹಾಗೂ  ಜಾರಿನಿರ್ದೇಶನಾಲಯ ಅಧಿಕಾರಿಗಳು  ಇಂದು ವಶಪಡಿಸಿದ್ದಾರೆ.ಕ್ಲಬ್ ನ ಅಧಿಕಾರಿಗಳು ಮಾಹಿತಿ ನೀಡಿದ ನಂತರ  1993 ರಿಂದಲೂ ಕ್ಲಬ್ ಸದಸ್ಯರಾಗಿರುವ  ಉದ್ಯಮಿ ಅವಿನಾಶ್ ಅಮರಲಾಲ್ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ   ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ವರ್ಷ ಕಳೆದಿದ್ದರೂ ಅವಿನಾಶ್  ಅಮರ್ ಲಾಲ್  ಲಾಕರ್ ತೆಗೆಯದಿದ್ದರಿಂದ ಈ ಬಗ್ಗೆ   ಹಲವು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ  ಲಾಕರ್ ಮುರಿದು ನೋಡಿದ್ದಾಗ  ಆರು ಬ್ಯಾಗ್ ಗಳು ಕಂಡುಬಂದವು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು  ಬೌರಿಂಗ್ ಇನ್ಸ್ ಟಿಟ್ಯೂಟ್  ಕ್ಲಬ್ ನ ಕಾರ್ಯದರ್ಶಿ ಎಚ್. ಎಸ್.   ಶ್ರೀಕಾಂತ್ ಹೇಳಿದ್ದಾರೆ.

ಆ ಬ್ಯಾಗ್ ನಲ್ಲಿ ಹಣ, ಚಿನ್ನಾಭರಣ ಇರಬಹುದೆಂದು ಶಂಕಿಸಿದ್ದೇವೆ. ನಿನ್ನೆ ರಾತ್ರಿ  10-30 ರ ಸುಮಾರಿನಲ್ಲಿ ಆ ಪ್ರದೇಶವನ್ನು ಪೊಲೀಸರು ನಿರ್ಬಂಧಿಸಿದರು ಎಂದು ಶ್ರೀಕಾಂತ್ ತಿಳಿಸಿದ್ದಾರೆ.

ಆದಾಯ ತೆರಿಗೆ  ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆ ಬ್ಯಾಗ್ ತೆರೆದು ನೋಡಿದಾಗ  3.90 ಕೋಟಿ ರೂ. ನಗದು, 7.80 ಕೋಟಿ ರೂ. ಮೌಲ್ಯದ ಚಿನ್ನಾಭರಣ, 15 ಲಕ್ಷ ರೂ. ಮೌಲ್ಯದ ರೊಲೆಕ್ಸ್ ವಾಚ್, 30 ರಿಂದ 35 ಲಕ್ಷ ರೂ. ಮೌಲ್ಯದ ಪ್ಯೂಜಿಯಟ್ ವಾಚ್  ಕಂಡುಬಂದಿತ್ತು.  ಅಲ್ಲದೇ ದೇವನಹಳ್ಳಿ,  ಬೇಗೂರು ,ಮತ್ತಿತರ ಕಡೆಗಳಲ್ಲಿನ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಸಹಿ ಮಾಡಿರುವ ಚೆಕ್ ಕಂಡುಬಂದಿದೆ.

ಈ ವೇಳೆ    ಹಣ ಮತ್ತು ವಜ್ರಾಭರಣ ನೀವೆ ಇಟ್ಟುಕೊಳ್ಳಿ, ಆದರೆ, ಆಸ್ತಿ ಪತ್ರ ಮಾತ್ರ ಕೊಡಿ ಎಂದು ಉದ್ಯಮಿ ಅವಿನಾಶ್  ಆಮಿಷ ಒಡಿದ್ದರು. ಕೆಲವರು ಅಪರಿಚಿತರು ಪೋನ್ ಮಾಡಿ  ಆ ವಸ್ತುಗಳನ್ನು ಅವಿನಾಶ್ ಅವರಿಗೆ ನೀಡುವಂತೆ ಒತ್ತಾಯಿಸಿದರು ಎಂದು ಶ್ರೀಕಾಂತ್ ತಿಳಿಸಿದರು.

ಕೆಲವರು ನಾನಿಲ್ಲದ ಸಂದರ್ಭದಲ್ಲಿ ನನ್ನ ಮನೆಯ ಹತ್ತಿರ ಹೋಗಿ  ವಿಚಾರಿಸಿದ್ದಾರೆ. ಮತ್ತೊಬ್ಬ ಕಚೇರಿಗೆ ಬಂದು ಆಸ್ತಿ ಪತ್ರ ನೀಡಿದ್ದರೆ 5 ಕೋಟಿ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದರು ಎಂದು ತಿಳಿಸಿದರು.

ಅವಿನಾಶ್ ನನ್ನು ಸದ್ಯ  ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದ್ದು,ಅವಿನಾಶ್ ಸಹಕಾರ ನೀಡುತ್ತಿರುವುದಾಗಿ ತಿಳಿದುಬಂದಿದೆ.  ಹಣ ಲಾಕರ್ ನಲ್ಲಿನ ದುರ್ಬಳಕೆ ಸಂಬಂಧ ಕ್ಲಬ್ ಅವಿನಾಶ್ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.

No Comments

Leave A Comment