Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕೋಲ್ಕತಾ : 20 ರ ಪತಿಯ ಎರಡೂ ಕಿವಿಗಳನ್ನು ಕತ್ತರಿಸಿದ 40 ರ ಪತ್ನಿ!

ಕೋಲ್ಕತಾ: ಶಾಕಿಂಗ್‌ ಸುದ್ದಿಯೊಂದರಲ್ಲಿ  20 ರ ಹರೆಯದ ಪತಿಯ ಎರಡೂ ಕಿವಿಗಳನ್ನು 40 ರ ಹರೆಯದ ಪತ್ನಿ ಕತ್ತರಿಸಿ ಹಾಕಿದ ಘಟನೆ ನಡೆದಿದೆ.

ನಾರ್‌ಕೇಲ್‌ ಡಂಗಾ ಎಂಬಲ್ಲಿ ಘಟನೆ ನಡೆದಿದ್ದು ತನ್ವೀರ್‌ ಎಂಬಾತನನ್ನು ಆತನ ಪತ್ನಿ ಮುಮ್ತಾಜ್‌  ಸಹೋದರಿಯರ ಸಹಾಯದಿಂದ ಹಿಡಿದು ಥಳಿಸಿ ಕಿವಿಗಳನ್ನು ಕತ್ತರಿಸಿ ಹಾಕಿದ್ದಾಳೆ.

2 ವರ್ಷಗಳ ಹಿಂದೆ ಸುಳ್ಳು ವಯಸ್ಸು ಹೇಳಿ ಮುಮ್ತಾಜ್‌ ತನ್ವೀರ್‌ನನ್ನು ವಿವಾಹವಾಗಿದ್ದಳು. ನಿರಂತರವಾಗಿ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ.ಹಲವು ಬಾರಿ ತನ್ವೀರ್‌ ಮನೆಯಿಂದ ಪಲಾಯನ ಗೈಯಲು ಯತ್ನಿಸಿದ್ದ ನಾದರೂ ಮುಮ್ತಾಜ್‌ ಎಲ್ಲಾ ಯತ್ನಗಳನ್ನು ವಿಫ‌ಲಗೊಳಿಸಿದ್ದಳು ಎಂದು ತಿಳಿದು ಬಂದಿದೆ.

ಒಮ್ಮೆ ಓಡಿ ಹೋಗಿದ್ದ ತನ್ವೀರ್‌ನನ್ನು ಹಿಡಿದು ಸಹೋದರಿಯರ ಜೊತೆಗೂಡಿ ಹಿಗ್ಗಾಮುಗ್ಗಾ ಥಳಿಸಿದ್ದರು ಎಂದು ತಿಳಿದು ಬಂದಿದೆ.

ಮುಮ್ತಾಜ್‌ ನನ್ನ ಕಿವಿಗಳನ್ನು ಕತ್ತರಿಸಿದ್ದಾಳೆ. ತಪ್ಪಿಸಿಕೊಳ್ಳಲು ಯತ್ನಿಸಿದರೆ ಕೊಂದೇ ಬಿಡುತ್ತಿದ್ದಳು ಎಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ತನ್ವೀರ್‌ ಹೇಳಿಕೊಂಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

No Comments

Leave A Comment