Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಶರತ್‌ ಕೊಪ್ಪು ಹಂತಕನನ್ನು ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು

ವಾಷಿಂಗ್ಟನ್‌ : ಕಳೆದ ಜುಲೈ 6ರಂದು ಕನ್ಸಾಸ್‌ ನಗರದಲ್ಲಿ 25ರ ಹರೆಯದ ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪು ಎಂಬಾತನನ್ನು ಗುಂಡಿಕ್ಕಿ ಸಾಯಿಸಿದ್ದ ಶಂಕಿತ ಆರೋಪಿಯನ್ನು ಅಮೆರಿಕ ಪೊಲೀಸರು ಎನ್‌ಕೌಂಟರ್‌ ನಡೆಸಿ ಗುಂಡಿಕ್ಕಿ ಕೊಂದಿರವುದಾಗಿ ವರದಿಯಾಗಿದೆ.

ಆರೋಪಿಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ; ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶರತ್‌ ಕೊಪ್ಪು ಅವರನ್ನು ಆತ ಕೆಲಸ ಮಾಡಿಕೊಂಡಿದ್ದ ಮಿಸೋರಿಯಲ್ಲಿನ ರೆಸ್ಟೋರೆಂಟ್‌ನಲ್ಲಿ ದರೋಡೆ ಯತ್ನದ ವೇಳೆ ಆರೋಪಿಯು ಗುಂಡಿಕ್ಕಿ ಕೊಂದಿದ್ದ.

No Comments

Leave A Comment