Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬಿಜೆಪಿ ನಾಯಕನ ಸಹಿತ ಮೂವರ ಮೇಲೆ ಗುಂಡಿನ ದಾಳಿ

ಬಲ್ಲಿಯಾ : ಅಪರಿಚಿತ ಹಂತಕರು ಇಂದಿಲ್ಲಿ ಓರ್ವ ಸ್ಥಳೀಯ ಬಿಜೆಪಿ ನಾಯಕನ ಸಹಿತ ಮೂವರ ಮೇಲೆ ಗುಂಡಿನ ದಾಳಿ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ.

ಮೌ ಜಿಲ್ಲೆಯಲ್ಲಿ  32ರ ಹರೆಯದ ಮುರಲೀಧರ ವರ್ಮಾ ಅವರು ತಮ್ಮ ಪತ್ನಿಯೊಂದಿಗೆ ಮೋಟಾರ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅವರ ಮೇಲೆ ಹಂತರು ಗುಂಡಿನ ದಾಳಿ ನಡೆಸಿದರು. ವರ್ಮಾ ಅವರ ಪತ್ನಿ ಪ್ರಿಯಾಂಕಾ ಮಾತ್ರವಲ್ಲದೆ ಅಜಿತ್‌ ಯಾದವ್‌ ಎಂಬ ಇನ್ನೋರ್ವರು ಕೂಡ ಹಂತಕರ ಗುಂಡೇಟಿನಿಂದ ಗಾಯಗೊಂಡರು.

ಈ ಮೂರೂ ಗಾಯಾಳುಗಳನ್ನು ಬೆಲ್ತಾರಾ ರಸ್ತೆಯಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಾರಾಣಸಿ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment