Log In
BREAKING NEWS >
ದೀಪ ಪ್ರಜ್ವಲಿಸುವುದರೊ೦ದಿಗೆ ಕಲ್ಯಾಣಪುರ ಭಜನಾ ಸಪ್ತಾಹ ಮಹೋತ್ಸವಕ್ಕೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರಿ೦ದ ಅದ್ದೂರಿಯ ಚಾಲನೆ........ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ದೆಹಲಿ ಆಯ್ತು, ಜಾರ್ಖಂಡ್‌ನ‌ಲ್ಲಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ

ಹಝಾರಿಬಾಗ್‌: ದೆಹಲಿಯ ಬುರಾರಿಯಲ್ಲಿ  ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಜಾರ್ಖಂಡ್‌ನ‌ ಹಝಾರಿಬಾಗ್‌ನ ಮನೆಯಲ್ಲಿ ಒಂದೇ ಕುಟುಂಬದ 6 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾರ್ವಾಡಿ ಕುಟುಂಬದ 6 ಮಂದಿ ಸಾವಿಗೆ ಶರಣಾಗಿದ್ದಾರೆ. ಓರ್ವ ಪುರುಷ , ಇಬ್ಬರು ಮಹಿಳೆಯರು ಮತ್ತಿಬ್ಬರು ಮಕ್ಕಳು ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಬಳಿಕ ಇನ್ನೋರ್ವ  ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ.

ಮೃತರು 70 ರ ಹರೆಯದ ಮಹಾವೀರ್‌ ಮಹೇಶ್ವರಿ,ಪತ್ನಿ ಕಿರಣ್‌, ಮಗ 40 ರ ನರೇಶ್‌ ಅಗರ್‌ವಾಲ್‌, ಪತ್ನಿ 38 ರ ಹರೆಯದ ಪ್ರೀತಿ ಮಕ್ಕಳಾದ ಅಮನ್‌(8) ಮತ್ತು ಅಂಜಲಿ(6)ಸಾವನ್ನಪ್ಪಿದವರು.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ,ಡೆತ್‌ ನೋಟ್‌ ಪತ್ತೆಯಾಗಿದೆ. ವಿಪರೀತ ಸಾಲ ಇದ್ದ ಕಾರಣಕ್ಕೆ ಕಂಗೆಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

No Comments

Leave A Comment