Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ವಿಶ್ವ ಜೂನಿಯರ್ ಅಥ್ಲೆಟಿಕ್ಸ್: ಚಿನ್ನ ಗೆದ್ದು ದಾಖಲೆ ಬರೆದ ಭಾರತದ ಅಥ್ಲೀಟ್ ಹಿಮ ದಾಸ್

ಟಂಪೆರೆ: ಫಿನ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ದಾಖಲೆ ನಿರ್ಮಾಣ ಮಾಡಿದ್ದು, ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅಂಡರ್ 20 ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಗೈದಿದ್ದಾರೆ. 18 ವರ್ಷದ ಹಿಮದಾಸ್ 400 ಮೀಟರ್ ಓಟವನ್ನು ಕೇವಲ 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಆ ಮೂಲಕ ಹಿಮದಾಸ್ ಜೂನಿಯರ್ ಅಥ್ಲೆಟಿಕ್ಸ್ ಚಿನ್ನ ಗೆದ್ದ ನೀರಜ್ ಚೋಪ್ರಾ ಪಟ್ಟಿಗೆ ಸೇರಿದ್ದಾರೆ. ನೀರಜ್ ಚೋಪ್ರಾ 2016ರಲ್ಲಿ ಪೋಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಪರ ಚಿನ್ನ ಗೆದಿದ್ದರು. ಇದಕ್ಕೂ ಮುನ್ನ ಸೀಮಾ ಪುನಿಯಾ ಅವರು 2002ರಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಕಂಚಿನ ಪದಕ ಗೆದಿದ್ದರು. ಇದು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಭಾರತದ ಪರ ದಾಖಲಾದ ಮೊದಲ ಪದಕವಾಗಿದೆ. ಇದಾದ ಬಳಿಕ ನವಜೀತ್ ಕೌರ್ ಧಿಲ್ಲಾನ್ ಡಿಸ್ಕಸ್ ಥ್ರೋ ವಿಭಾಗದಲ್ಲಿ 2014ರಲ್ಲಿ ಕಂಚಿನ ಪಂದಕ ಗೆದಿದ್ದರು.
No Comments

Leave A Comment