Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಉಪ್ಪಳ ಭೀಕರ ರಸ್ತೆ ಅಪಘಾತ ಐವರು ದುರ್ಮರಣ

ಕಾಸರಗೋಡು : ಲಾರಿ ಹಾಗೂ ಜೀಪಿನ ನಡುವೆ ಸಂಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ಕಾಸರಗೋಡಿನ ಉಪ್ಪಳ ಸಮೀಪ ನಯಾ ಬಜಾರ್ ಬಳಿ ಸಂಭವಿಸಿದೆ.

ಮೃತರು ದಕ್ಷಿಣಕನ್ನಡ ಜಿಲ್ಲೆಯ ಕೆ.ಸಿ.ರೋಡ್ ನಿವಾಸಿಗಳಾದ ಅಸ್ಮಾ(30), ಬಿಫಾತಿಮ(65), ನಸೀಮಾ(38), ಮುಸ್ತಾಕ್ (41) ಹಾಗೂ ಇಮ್ತಿಯಾಜ್ (35) ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನಲ್ಲಿ ಮಕ್ಕಳು ಸೇರಿ ಸುಮಾರು 18 ಮಂದಿ ಪ್ರಯಾಣಿಸುತ್ತಿದ್ದರು, ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

No Comments

Leave A Comment