Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಾರಿನ ಮೇಲುರುಳಿದ ಬೃಹತ್‌ ಮರ; ಬಂಟ್ವಾಳದಲ್ಲಿ ಹೆದ್ದಾರಿ ಬ್ಲಾಕ್‌

ಬಂಟ್ವಾಳ: ಇಲ್ಲಿನ ಮಿತ್ತೂರು ಬಳಿ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ  ಬೃಹತ್‌ ಮರ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ್ದು, ಅದೃಷ್ಟವಷಾತ್‌ ಕಾರಿನಲ್ಲಿದ್ದ ನಾಲ್ವರು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ಮರ ಬಿದ್ದ ಕಾರಣ ಮಾಣಿ-ಮೈಸೂರು ಹೆದ್ದಾರಿ ಬ್ಲಾಕ್‌ ಆಗಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಮರಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾರಿನಲ್ಲಿದ್ದವರು ಬೆಂಗಳೂರಿನಿಂದ ಧರ್ಮಸ್ಥಕ್ಕೆ ತೆರಳುತ್ತಿದ್ದ ಯಾತ್ರಿಗಳು ಎಂದು ತಿಳಿದು ಬಂದಿದೆ.

ಕಾರಿನಲ್ಲಿದ್ದವರು ಯಾವುದೇ ಗಾಯಗಳಿಗೊಳಗಾಗಿಲ್ಲ ಎಂದು ಹೇಳಲಾಗಿದ್ದು , ಅವರಿಗೆ ಕಾರಿನಿಂದ ಹೊರ ಬರದು ಸ್ಥಳೀಯರು ನೆರವು ನೀಡಿದ್ದಾರೆ.

ಭಾರೀ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಮರಗಳು ಉರುಳಿ ಬಿದ್ದಿವೆ. ವಿದ್ಯುತ್‌ ತಂತಿಗಳು ಮರಗಳೊಂದಿಗೆ ನೆಲಕಚ್ಚಿವೆ.

No Comments

Leave A Comment