Log In
BREAKING NEWS >
Smriti Irani says writing on the wall for Rahul Gandhi...

ಶಿವರಾಮ ಜೋಗಿ ಇವರಿಗೆ  “ಸಾಮಗ ಪ್ರಶಸ್ತಿ” ಪ್ರದಾನ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತುಳುಕೂಟ(ರಿ)ಉಡುಪಿ ಇವರು ಆಯೋಜಿಸಿದ ಮಲ್ಪೆ ರಾಮದಾಸ ಸಾಮಗರ ನೆನಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರೊಂದಿಗೆ ಹಿರಿಯ ಯಕ್ಷಗಾನ ಕಲಾವಿದರಾದ ಶಿವರಾಮ ಜೋಗಿ ಇವರಿಗೆ  “ಸಾಮಗ ಪ್ರಶಸ್ತಿ” ಪ್ರದಾನ ಮಾಡಿ ಹಣ್ಣುಗಳಲ್ಲಿ ವಿಶೇಷವಾದ ಹಲಸು ಅದರಲ್ಲೂ ತುಳುವ ಹಲಸು ಬಹಳ ರುಚಿ ಆಗಿರುವಂತೆ ತುಳು ಭಾಷೆಯು ಬಹಳ ರುಚಿ, ಅದರಂತೆಯೇ ತುಳುವರಿಗೆ ಇಷ್ಟವಾಗುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ತುಳುಕೂಟದ ಅಧ್ಯಕ್ಷತೆಯನ್ನು ಬಿ.ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು,ಮುಖ್ಯಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸದಸ್ಯರಾದ ಐರೋಡಿ ರಾಜಶೇಖರ ಹೆಬ್ಬಾರ್ ಹಾಗೂ ಉಡುಪಿಯ ಉದ್ಯಮಿಗಳಾದ ಯಕ್ಷಾಭಿಮಾನಿ ಯು.ವಿಶ್ವನಾಥ ಶೆಣೈ ಭಾಗವಿಸಿದ್ದರು.

No Comments

Leave A Comment