Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಮುಂದುವರಿದ ಭಾರೀ ಮಳೆ; ಬೀಡು ಬಿಟ್ಟಿರುವ ಎನ್ ಡಿಆರ್ ಆರ್ ಎಫ್ ತಂಡ

ಮಂಗಳೂರು: ಕಡಲನಾಡು ಕರಾವಳಿ ಮತ್ತು ಉಡುಪಿ ಜಿಲ್ಲೆಗಳಲ್ಲಿ  ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾನುವಾರ ಕೂಡ ಮುಂದುವರಿದಿದೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಜನರಿಗೆ ಸಹಾಯವಾಗಲು ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕುಗಳಲ್ಲಿ ಸಹಾಯವಾಣಿಯನ್ನು ಜಿಲ್ಲಾಡಳಿತ ತೆರೆದಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಮಳೆ ಸಹಾಯವಾಣಿಯನ್ನು ತೆರೆಯಲಾಗಿದೆ.ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ‌ ನದಿಗಳು ತುಂಬಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆಯಲ್ಲಿ ನಿನ್ನೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.ಜನರ ರಕ್ಷಣೆಗೆ ಧಾವಿಸಿರುವ ರಾಷ್ಟ್ರೀಯ ಭದ್ರತಾ ರಕ್ಷಣಾ ಪಡೆಯ 30 ಮಂದಿ ತಂಡ ಇಂದು ಮಂಗಳೂರಿಗೆ ಆಗಮಿಸಿದೆ. ಒಂದು ತಂಡ ದಕ್ಷಿಣ ಕನ್ನಡ ಮತ್ತು ಇನ್ನೊಂದು ತಂಡ ಉಡುಪಿ ಜಿಲ್ಲೆಯಲ್ಲಿ ಪರಿಹಾರ ಕಾರ್ಯ ನಡೆಸಲಿದೆ.

ಮಂಗಳೂರು ಜಿಲ್ಲೆಯ ಹಲವು ತಾಲ್ಲೂಕುಗಳು, ಉಡುಪಿ ಜಿಲ್ಲೆಯ ಕಾರವಾರ, ಹೆಬ್ರಿ ಮೊದಲಾದ ಕಡೆಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ, ಕಾಫಿನಾಡು ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸಹ ಧಾರಾಕಾರ ಮಳೆಯಾಗುತ್ತಿದೆ.ಕಳೆದ 2 ದಿನಗಳಿಂದ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಮೂವರು ಮೃತಪಟ್ಟಿದ್ದಾರೆ. ಕುಂಭದ್ರೋಣ ಮಳೆಗೆ ಪುತ್ತೂರು ತಾಲೂಕಿನ ಹೆಬ್ಬಾರ್ ಬೈಲ್ ಎಂಬಲ್ಲಿ ಗುಡ್ಡದ ಬದಿಯಲ್ಲಿದ್ದ ಮಣ್ಣು ಕುಸಿದು ಬಿದ್ದು ಮನೆಯಲ್ಲಿ ‌ಮಲಗಿದ್ದ ಇಬ್ಬರು ಮೃತಪಟ್ಟಿದ್ದಾರೆ.

 ಮೃತರನ್ನು ಅಜ್ಜಿ ಪಾರ್ವತಿ ಹಾಗೂ ಮೊಮ್ಮಗ ಧನುಷ್ ಎಂದು ಗುರುತಿಸಲಾಗಿದೆ. ಪುತ್ತೂರು ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲದ ಸುದೆಕಟ್ಟೆ ಮಾರ್‌ನಲ್ಲಿ ಕಮಲ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ಮನೆ ಹಾನಿ ಮತ್ತು ಸಾವಿನ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಯು ಟಿ ಖಾದರ್ ಅಧಿಕಾರಿಗಳ ತುರ್ತು ಸಭೆ ನಡೆಸಿ ಎಲ್ಲ ಅಧಿಕಾರಿಗಳು ಜಾಗೃತರಾಗಿರುವಂತೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದಾರೆ.ಇದೇ 11ರವರೆಗೆ ಪ್ರತಿದಿನ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದರಿಂದ ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಯು ಟಿ ಖಾದರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮಳೆಗೆ ಜಲಾವೃತವಾಗಿ ಜನರು ದೋಣಿ ಮೂಲಕ ಹೋಗುತ್ತಿರುವುದುಜಿಲ್ಲೆಯಲ್ಲಿ ಇದುವರೆಗೆ 10 ಸಾವು: ಕಳೆದ ಮೂರು ದಿನಗಳಲ್ಲಿ ಮಳೆಗೆ 15 ಮನೆಗಳು ಸೇರಿದಂತೆ 929 ಮನೆಗಳಿಗೆ ಹಾನಿಯಾಗಿದೆ. ಸುಳ್ಯ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಹಿಂದೆ ಎಂಟು ಹಾಗೂ ಶುಕ್ರವಾರ ರಾತ್ರಿ ಎರಡು ಸೇರಿ ಒಟ್ಟು 10 ಸಾವು ಸಂಭವಿಸಿದೆ. ಒಟ್ಟು ನಾಲ್ಕು ಪ್ರಕರಣಗಳ ಚೆಕ್ ವಿತರಣೆ ಬಾಕಿ ಇದೆ. ಪುತ್ತೂರಿನ ಇಬ್ಬರ ಕುಟುಂಬಗಳ ಪರಿಹಾರದ ಚೆಕ್ ಸಿದ್ಧಪಡಿಸಲಾಗಿದೆ ಎಂದರು. ಚಿಕ್ಕಮಗಳೂರಿನ ಶೃಂಗೇರಿ ಠಾಣಾ ವ್ಯಾಪ್ತಿಯ ಗೋಣಿ ಬೈಲು ಎಂಬಲ್ಲಿ  ನೀರು ತುಂಬಿದ ಕೃಷಿ ಹೊಂಡದಲ್ಲಿ  ಬಿದ್ದು ರೈತ ಸುರೇಂದ್ರ ಎಂಬುವವರು ಮೃತಪಟ್ಟಿದ್ದಾರೆ.ಕೊಡಗು ಜಿಲ್ಲೆಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿದ್ದು ಸಂಚಾರ ಸ್ಥಗಿತಗೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಸೊಂಟದವರೆಗೆ ನೀರು ತುಂಬಿದ ಮಳೆಯಲ್ಲಿಯೇ ಜನರು ಸಂಚರಿಸುತ್ತಿರುವುದು.ಉಡುಪಿ ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನ ಬಳಿ ತಗ್ಗು ಪ್ರದೇಶದಲ್ಲಿ ನೀರು ತುಂಬಿತ್ತು. ಇದರಿಂದಾಗಿ ಗರ್ಭಿಣಿ ಸೇರಿದಂತೆ ಹಲವು ಕುಟುಂಬಗಳು ಮನೆಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಬೋಟ್​ ಮೂಲಕ ಗರ್ಭಿಣಿ ಮತ್ತು ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

No Comments

Leave A Comment