Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಾಶ್ಮೀರ:ಉಗ್ರರಿಂದ ಕಾನ್‌ಸ್ಟೇಬಲ್‌ ಹತ್ಯೆ,ಇಮಾಮ್‌ ಮೇಲೆ ಫೈರಿಂಗ್‌

ಶ್ರೀನಗರ : ಕಣಿವೆ ರಾಜ್ಯದಲ್ಲಿ ಆಪರೇಷನ್‌ ಆಲೌಟ್‌ಗೆ ಪ್ರತಿತಂತ್ರ ಹೂಡಿರುವ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಗುರುವಾರ ಪೊಲೀಸ್‌ ಪೇದೆಯೊಬ್ಬರನ್ನು ಅಪಹರಿಸಿ ಹತ್ಯೆಗೈದಿದ್ದು, ಶುಕ್ರವಾರ ಬೆಳಗಿನ ಜಾವ ಇಮಾಮ್‌ ವೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿವೆ.

ಶೋಪಿಯಾನ್‌ನಲ್ಲಿ ಗುರುವಾರ ಸಂಜೆ ಉಗ್ರರಿಂದ ಅಪಹರಣಕ್ಕೊಳಗಾದ ಕಾನ್‌ಸ್ಟೇಬಲ್‌  ಕುಲ್‌ಗಾಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕರ್ತವ್ಯ ನಿರತರಾಗಿದ್ದ ಜಾವೀದ್‌ ಅಹಮದ್‌ ದಾರ್‌ ಅವರನ್ನು ಕಾರಿನಲ್ಲಿ ಬಂದಿದ್ದ ಶಸ್ತ್ರಧಾರಿ ಉಗ್ರರು ಗನ್‌ಪಾಯಿಂಟ್‌ನಲ್ಲಿ ಅಪಹರಣ ಗೈದಿದ್ದರು.

ಅಪಹರಣ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಮತ್ತು ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದ್ದರು.

ಪುಲ್ವಾಮಾದಲ್ಲಿ 45 ರ ಹರೆಯದ ಇಮಾಮ್‌ ಮೇಲೆ ಉಗ್ರರ ಗುಂಪು ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಜೂನ್‌ 14 ರಂದು ಸೇನಾ ಯೋಧ ಔರಂಗಜೇಬ್‌ ಅವರನ್ನು ಅಪಹರಿಸಿದ್ದ ಉಗ್ರರು ಬರ್ಬರವಾಗಿ ಹತ್ಯೆಗೈದಿದ್ದರು.

Read more at https://www.udayavani.com/kannada/news/national-news/306873/terrorists-kill-abducted-jammu-and-kashmir-police-constable#g1sf6BbgiL18MRVQ.99

No Comments

Leave A Comment