Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಶಂಕರಾಚಾರ್ಯ ಜಯಂತಿ: ಶೃಂಗೇರಿಯಲ್ಲಿ ಸಂಭ್ರಮ

ಶೃಂಗೇರಿ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ದಿ ಮಂಡಳಿ ರಚನೆ ಮತ್ತು ರಾಜ್ಯ ಸರಕಾರದ ವತಿಯಿಂದಲೇ ಶಂಕರಾಚಾರ್ಯ ಜಯಂತಿ ಆಚರಣೆಗೆ ನಿರ್ಧರಿಸಿರುವುದು ಶೃಂಗೇರಿಯಲ್ಲಿ ಸಂತಸಕ್ಕೆ ಕಾರಣವಾಗಿದೆ.

ಬ್ರಾಹ್ಮಣ ಅಭಿವೃದ್ದಿ ಮಂಡಳಿ ರಚಿಸಿ ಅದಕ್ಕೆ 25 ಕೋಟಿ ರೂ. ಅನುದಾನ ಒದಗಿಸುವುದು ಮತ್ತು ಆದಿ ಶಂಕರಾಚಾರ್ಯರ ಗೌರವಾರ್ಥ ರಾಜ್ಯಾದ್ಯಂತ ಆದಿ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಸಿಎಂ ಎಚ್‌ಡಿ ಕುಮಾರಸ್ವಾಮಿ ಘೋಷಿಸಿದ್ದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ
ಚುನಾವಣೆಗೂ ಮೊದಲು ಶೃಂಗೇರಿಯಲ್ಲಿ ಜೆಡಿಎಸ್‌ ಮುಖ್ಯಸ್ಥ ಎಚ್‌ಡಿ ದೇವೇಗೌಡ ಮತ್ತು ಕುಟುಂಬಿಕರು ಹಲವು ಹೋಮ ಮತ್ತು ಯಾಗಾದಿಗಳನ್ನು ನಡೆಸಿದ್ದರು. ಅಲ್ಲದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೂ ಮೊದಲು ಶೃಂಗೇರಿ ಶಾರದಾ ಪೀಠ ಮತ್ತು ದೇಗುಲಕ್ಕೆ ಭೇಟಿ ನೀಡಿ ಭಾರತೀ ತೀರ್ಥ ಶ್ರೀಗಳ ಆಶೀರ್ವಾದ ಪಡೆದಿದ್ದರು.

ಶತಮಾನಗಳ ಹಿಂದೆ ಧರ್ಮ ಸ್ಥಾಪನೆ ಮತ್ತು ರಕ್ಷಣೆಗೆ ಕಾರಣರಾದ ಆದಿ ಶಂಕರಾಚಾರ್ಯರ ಜಯಂತಿ ಆಚರಣೆಗೆ ಸರಕಾರ ನಿರ್ಧರಿಸಿರುವುದು ಸಂತಸ ತಂದಿದೆ ಎಂದು ಶೃಂಗೇರಿಯ ಕೆ. ಶ್ರೀಕಾಂತ ಭಟ್ ತಿಳಿಸಿದ್ದಾರೆ.

No Comments

Leave A Comment