Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಅಯೋಧ್ಯೆ ತೀರ್ಪು ವಿಳಂಬವಾದರೆ ಹೋರಾಟ: ವಿಹಿಂಪ ಕಾರ್ಯಾಧ್ಯಕ್ಷ

ಹೊಸದಿಲ್ಲಿ : ವರ್ಷಾಂತ್ಯದೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲು ಸಾಧ್ಯವಾಗುವಂತೆ ಸುಪ್ರೀಂ ಕೋರ್ಟ್‌ ರಾಮ ಜನ್ಮಭೂಮಿ ವಿವಾದವನ್ನು ಬೇಗನೆ ಬಗೆಹರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಆಲೋಕ್‌ ಕುಮಾರ್‌ ಆಗ್ರಹಿಸಿದ್ದಾರೆ. ಒಂದೊಮ್ಮೆ ಸುಪ್ರೀಂ ಕೋರ್ಟ್‌ ತೀರ್ಪು ವಿಳಂಬಿಸಿದರೆ ನಾವು ಹೋರಾಡುವೆವು ಎಂದವರು ಹೇಳಿದ್ದಾರ.

ರಾಮ ಮಂದಿರ ಮಾತ್ರವಲ್ಲದೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಆಲೋಕ್‌ ಕುಮಾರ್‌ ಅವರು ವಿಎಚ್‌ಪಿಗೆ ಸಿಐಎ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲು ಮುಂದಾಗಿರುವ ವಿಷಯವನ್ನೂ ಚರ್ಚಿಸಿದರು.

ಅಯೋಧ್ಯೆಯ ವಿವಾದಿತ ತಾಣವು ರಾಮ ಲಲ್ಲಾನಿಗೆ ಸೇರಿದ್ದೆಂದು ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುವುದು ಸುಲಭವಾಗುವುದು ಎಂದವರು.

No Comments

Leave A Comment