Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ದೆಹಲಿ: ಮಾನಸಿಕ ಸಮಸ್ಯೆಯಿಂದ ಬುರಾರಿ ಕುಟುಂಬ ಸಾಮೂಹಿಕ ಆತ್ಮಹತ್ಯೆ- ಪೊಲೀಸರ ಹೇಳಿಕೆ

ನವದೆಹಲಿ: ಬುರಾರಿಯಲ್ಲಿ ನಡೆದಿದ್ದ ಕುಟುಂಬವೊಂದರ 11 ಮಂದಿ ನಿಗೂಢ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು , ಕುಟುಂಬ ಅನುಸರಿಸಿದ ಆಚರಣೆಯೇ  ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ.

11 ಮೃತದೇಹಗಳ  ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ದೊರೆತ ಬಳಿಕ ಅಂತಿಮ ವರದಿ ಸಿದ್ದಪಡಿಸುವುದಾಗಿ  ಅಧಿಕಾರಿಗಳು ಹೇಳಿದ್ದಾರೆ. ಆದರೆ,  ಸ್ವಲ್ಪ ವರದಿ ಹೊರ ಬಂದಿದೆ.

ಕೇಂದ್ರ ಅಪರಾಧ ವಿಭಾಗ ಈ ಪ್ರಕರಣದ ವರದಿಯನ್ನು ದೆಹಲಿ ಪೊಲೀಸ್ ಆಯುಕ್ತರಾದ ಅಮೂಲ್ಯ ಪಟ್ನಾಯಕ್ ಅವರಿಗೆ ನೀಡಲಿದೆ. ನಂತರ ಗೃಹ ಸಚಿವಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 1 ರಂದು ಎರಡು ಅಂತಸ್ತಿನ ಮನೆಯಿಂದ  ಏಳು ಮಹಿಳೆಯರು ಹಾಗೂ ನಾಲ್ಕು ಪುರುಷರ ಮೃತದೇಹಗಳನ್ನು ಹೊರತೆಗೆಯಲಾಗಿತ್ತು.  ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ನೇಣು ಹಾಕಿಕೊಂಡಿದ್ದರು. ಮನೆಯ ಹಿರಿಯ ಭಾಟಿಯಾ ಹಾಗೂ ನಾರಾಯಣಿ ದೇವಿ  ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಭಾಟಿಯಾ ಮನೆಯ ಎದುರುಗಡೆಯ ಆವರಣದಲ್ಲಿನ ಸಿಸಿಟಿವಿ ದೃಶ್ಯಗಳು  ತನಿಖೆಗೆ  ನೆರವಾಗುವುದರ ಜೊತೆಗೆ ಸಾಮೂಹಿಕ ಆತ್ಮಹತ್ಯೆ ಎಂಬುದು ಅರಿಯುವಂತಾಯಿತು ಎಂದು ಅಪರಾಧ ವಿಭಾಗದ ಮುಖ್ಯ  ಜಂಟಿ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

 ಸಿಸಿಟಿವಿಯಲ್ಲಿ ಏನಿದೆ : ಕುಟುಂಬ ಸದಸ್ಯರೊಬ್ಬರು ಐದು ಸ್ಟೂಲ್ ತರುವುದು , ಮತ್ತೊಬ್ಬರು ಪ್ಲೈವುಡ್ ನಿಂದ ಕೇಬಲ್  ತಂದಿದ್ದಾರೆ.   11 ಮಂದಿ ಆತ್ಮಹತ್ಯೆ ಮಾಡಿಕೊಂಡು ಸ್ಥಳದಲ್ಲಿ ಈ ವಸ್ತುಗಳು ದೊರೆತಿದ್ದವು ಎಂದು ಅವರು ತಿಳಿಸಿದ್ದಾರೆ.

ಲಲಿತ್ ಭಟಿಯಾ ಹಾಗೂ ಮನೆಯ ಸದಸ್ಯ ಪ್ರಿಯಾಂಕಾ ಆಚರಣೆ ಪದ್ಧತಿಯ ಬಗ್ಗೆ ನೋಟ್ ಪುಸ್ತಕದಲ್ಲಿ ಬರೆದಿದ್ದಾರೆ. ಆ ನೋಟ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣದಲ್ಲಿ ಹೊರಗಿನ ಬೇರೆ ಯಾವ ವ್ಯಕ್ತಿಗಳು ಭಾಗಿಯಾಗಿಲ್ಲ ಎಂದು ಕುಮಾರ್  ಹೇಳಿದ್ದಾರೆ. ಲಲಿತ್  ಪ್ಲೈವುಡ್ ಮಳಿಗೆಗೆ ಹೋಗುತ್ತಿದ್ದರೆ.  ಪ್ರಿಯಾಂಕಾ ಆಚರಣೆಯ ಬಗ್ಗೆ ಬರೆಯುತ್ತಿದ್ದರು. ಲಲಿತ್  10 ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಅವರ ತಂದೆ ಗೋಪಾಲ್ ದಾಸ್ ಅವರಿಂದ ಸೂಚನೆ ಪಡೆಯುತ್ತಾರೆ ಎಂದು ಕುಟುಂಬದ ಎಲ್ಲಾ ಸದಸ್ಯರು ನಂಬಿದ್ದರು. ಇಂತಹ ಮಾನಸಿಕ ಅಸ್ವಸ್ಥತೆ ಆಚರಣೆಯಾಗಿ ಬದಲಾಗಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment