Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಗ್ರಾಹಕರ ಸೋಗಿನ ದಂಪತಿಯಿಂದ 24 ಲಕ್ಷ ರೂ. ಚಿನ್ನಾಭರಣ ದರೋಡೆ

ಹೈದರಾಬಾದ್‌ : ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜ್ಯುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಓರ್ವ ಪುರುಷ ಮತ್ತು ಮಹಿಳೆ, ಅಂಗಡಿ ಮಾಲಕನ ಕಣ್ಣಿಗೆ ಮೆಣಸಿನ ಪುಡಿ ಎರಚಿ 24 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ ಘಟನೆ ವರದಿಯಾಗಿದೆ.

ಜೈ ಭವಾನಿ ಜ್ಯುವೆಲ್ಲರಿ ಶಾಪ್‌ ನ 32ರ ಹರೆಯದ ಮಾಲಕ ಜಯರಾಮ್‌ ಅವರು ಗ್ರಾಹಕರ ಸೋಗಿನಲ್ಲಿ ಬಂದಿದ್ದ ದಂಪತಿಗೆ ಶೋ ಕೇಸಿನಲ್ಲಿದ್ದ ಚಿನ್ನಾಭರಣಗಳನ್ನು ತೋರಿಸಿದ ಬಳಿಕ ಹೆಚ್ಚಿನ ಒಡವೆಗಳನ್ನು ತರಲೆಂದು ಸ್ಟ್ರಾಂಗ್‌ ರೂಮ್‌ ಗೆ ಹೋಗಿದ್ದರು.

ಆಗ ಪುರುಷ ಗ್ರಾಹಕನು ಅವರನ್ನು ಅನುಸರಿಸಿ ಒಳಗೆ ಹೋಗಿ ದರೋಡೆಗೆ ಮುಂದಾದ. ಆಗ ಜಯರಾಮ್‌ ಅವರು ಆತನೊಂದಿಗೆ ಗುದಾxಡಿದರು. ಆಗ ಆತ ಜಯರಾಮ್‌ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ 24 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಕದ್ದೊಯ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment