Log In
BREAKING NEWS >
Smriti Irani says writing on the wall for Rahul Gandhi...

ಅಂಧೇರಿ ಸೇತುವೆ ಕುಸಿತ: ಭಾರಿ ಅನಾಹುತ ತಪ್ಪಿಸಿದ ರೈಲು ಚಾಲಕ

ಮುಂಬೈ: ಧಾರಾಕಾರ ಮಳೆಗೆ ಅಂಧೇರಿ ಪಶ್ಚಿಮ ಭಾಗದಿಂದ ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ರೈಲು ಹಳಿಯ ಮೇಲೆ ಕುಸಿದು ಬಿದ್ದಿದ್ದು ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ರೈಲಿನ ಚಾಲಕ ತುರ್ತು ಬ್ರೇಕ್ ಹಾಕುವ ಮೂಲಕ ತಡೆದಿದ್ದಾರೆ.
ರೈಲು ಹಳಿಯ ಮೇಲೆ ಸೇತುವೆ ಕುಸಿಯುತ್ತಿರುವುದರ ಬಗ್ಗೆ ಸುಳಿವು ದೊರೆಯುತ್ತಿದ್ದಂತೆಯೇ ಎಚ್ಚೆತ್ತ ಸ್ಥಳೀಯ ರೈಲು ಚಾಲಕ ಚಂದ್ರಶೇಖರ್ ಸಾವಂತ್, ತುರ್ತು ಬ್ರೇಕ್ ಹಾಕಿ ಮೇಲ್ಸೇತುವೆ ಕುಸಿಯುತ್ತಿದ್ದ ಪ್ರದೇಶದಿಂದ ಕೆಲವೇ ಮೀಟರ್ ಗಳಷ್ಟು ದೂರದಲ್ಲಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಂಭವಿಸಬಹುದಾಗಿದ್ದ ಅಪಾರ ಪ್ರಮಾಣದ ಜೀವ ಹಾನಿಯನ್ನು ತಡೆಗಟ್ಟಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಎಂದಿನಂತೆ ರೈಲು ಈ ಮಾರ್ಗದಲ್ಲಿ ಚಲಿಸುತ್ತಿತ್ತು, ಆದರೆ ಮೇಲ್ಸೇತುವೆ ಕುಸಿಯುತ್ತಿರುವುದು ಕಾಣಿಸುತ್ತಿದ್ದಂತೆಯೇ, ತಕ್ಷಣವೇ ತುರ್ತು ಬ್ರೇಕ್ ನ್ನು ಹಾಕಿ ರೈಲನ್ನು ಸಾಧ್ಯವಾದಷ್ಟೂ ದೂರ ನಿಲ್ಲಿಸಲು ಯತ್ನಿಸಿದೆ ಎಂದು ಚಂದ್ರಶೇಖರ್ ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಯಾಣಿಕರ ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿರುವ ಸಾವಂತ್1997 ರಿಂದ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
No Comments

Leave A Comment