Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಸ್ವೀಡನ್‌ ಕ್ವಾರ್ಟರ್‌ಫೈನಲಿಗೆ

ಸೇಂಟ್‌ ಪೀಟರ್ಬರ್ಗ್‌: ಎಮಿಲ್‌ ಫೋರ್ಸ್‌ಬರ್ಗ್‌ ಅವರ ಅಮೊಘ ಗೋಲಿನಿಂದ ಸ್ವೀಡನ್‌ ತಂಡವು ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಮಂಗಳವಾರ ನಡೆದ ನಾಕೌಟ್‌ ಹಂತದ ಪಂದ್ಯದಲ್ಲಿ ಸ್ವಿಜರ್‌ಲ್ಯಾಂಡ್‌ ತಂಡವನ್ನು 1-0 ಗೋಲಿನಿಂದ ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದೆ.

ಅಮೆರಿಕದಲ್ಲಿ ನಡೆದ 1994ರ ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿ ಕ್ವಾರ್ಟರ್‌ಫೈನಲ್‌ ಹಂತ ತಲುಪಿದ ಸಾಧನೆಗೈದ ಸ್ವೀಡನ್‌ ತಂಡವು ಇಂಗ್ಲೆಂಡ್‌ ಅಥವಾ ಕೊಲಂಬಿಯಾ ತಂಡದ ಸವಾಲನ್ನು ಎದುರಿಸಲಿದೆ.

ಸ್ವೀಡನ್‌ ಮತ್ತು ಸ್ವಿಜರ್‌ಲ್ಯಾಂಡ್‌ ನಡುವಣ ಈ ಕಾದಾಟ ತೀವ್ರ ಪೈಪೋಟಿಯಿಂದ ಸಾಗಿತು. ಎರಡೂ ತಂಡಗಳ ಆಟಗಾರರು ಗೋಲು ಹೊಡೆಯಲು ಶಕ್ತಿಮೀರಿ ಪ್ರಯತ್ನಿಸಿದರು. ಪಂದ್ಯದ ಮೊದಲ ಅವಧಿ ಗೋಲು ರಹಿತವಾಗಿತ್ತು. ಆದರೆ ದ್ವಿತೀಯ ಅವಧಿಯ 66ನೇ ನಿಮಿಷದಲ್ಲಿ ಎಮಿಲ್‌ ಫೋರ್ಸ್‌ಬರ್ಗ್‌ ಗೋಲು ಹೊಡೆದ ಕಾರಣ ಸ್ವೀಡನ್‌ ಮುನ್ನಡೆ ಸಾಧಿಸಿತು.

90 ನಿಮಿಷದ ಬಳಿಕ ಇಂಜುರಿ ಅವಧಿಯಲ್ಲಿ ಈ ಪಂದ್ಯದಲ್ಲಿ ಯಾವುದೇ ಮ್ಯಾಜಿಕ್‌ ನಡೆಯಲಿಲ್ಲ. ಈ ವೇಳೆ ಸ್ವೀಡನ್‌ಗೆ ಪೆನಾಲ್ಟಿ ನೀಡಲಾಗಿತ್ತು. ಆದರೆ ಅಂತಿಮವಾಗಿ ಅದನ್ನು ಫ್ರೀ ಕಿಕ್‌ ಆಗಿ ಪರಿವರ್ತಿಸಲಾಯಿತು. ಇದರಲ್ಲಿ ಗೋಲು ಹೊಡೆಯಲು ಸ್ವೀಡನ್‌ಗೆ ಸಾಧ್ಯವಾಗಲಿಲ್ಲ. ಎದುರಾಳಿ ಆಟಗಾರನಿಗೆ ತೊಂದರೆ ನೀಡಿದ ಮೈಕಲ್‌ ಲಾಂಗ್‌ ಅವರಿಗೆ ರೆಡ್‌ ಕಾರ್ಡ್‌ ನೀಡಲಾಯಿತು.

ಪಂದ್ಯದ ಬಹುತೇಕ ಅವಧಿಯಲ್ಲಿ ಚೆಂಡು ಸ್ವಿಸ್‌ ಕೈಯಲ್ಲಿ ಇತ್ತು. ಆದರೆ ಅವರ ಆಕ್ರಮಣದಲ್ಲಿ ಯಾವುದೇ ಮೊನಚು ಇರಲಿಲ್ಲ. ನಾಲ್ಕು ಬಾರಿ ಗೋಲು ಹೊಡೆಯುವ ಅವಕಾಶ ಪಡೆದಿದ್ದರೂ ಹೊಡೆದ ಚೆಂಡು ಹೊರಗೆ ಹೋಗಿತ್ತು. ಉಭಯ ಆಟಗಾರರ ಕಳಪೆ ಗುಣಮಟ್ಟದ ಆಟ ಮತ್ತು ಆಕ್ರಮಣಕಾರಿ ಆಟದ ಪ್ರದರ್ಶನವನ್ನು ನೋಡಿದ ಪ್ರೇಕ್ಷಕರು ಒಂದೇ ಸವನೇ ಕಿರುಚಲು ಆರಂಭಿಸಿದ್ದರು. ಮೊದಲ ಅವಧಿಯಲ್ಲಿ ಸ್ವೀಡನ್‌ ಆಟಗಾರರು ಎದುರಾಳಿ ಆಟಗಾರರ ಗೋಲು ಹೊಡೆಯುವ ಪ್ರಯತ್ನ ತಡೆಯಲು ಹೆಚ್ಚಿನ ಗಮನ ನೀಡಿದ್ದರು.

27ನೇ ನಿಮಿಷದಲ್ಲಿ ಸ್ವೀಡನ್‌ನ ಮಾರ್ಕಸ್‌ ಬೆರ್ಗ್‌ ಹೊಡೆದ ಚೆಂಡನ್ನು ಸ್ವಿಸ್‌ ಗೋಲ್‌ಕೀಪರ್‌ ಯಾನ್‌ ಸೊಮ್ಮೆರ್‌ ಯಶಸ್ವಿಯಾಗಿ ತಡೆದಿದ್ದರು. ಆಬಳಿಕ ಅಲ್ಬಿನ್‌ ಎಕಾªಲ್‌ ಗೋಲು ಹೊಡೆಯುವ ಅವಕಾಶವೊಂದನ್ನು ನಿರ್ಮಿಸಿದ್ದರು. ಆದರೆ ಇದರಲ್ಲಿ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ. ಇನ್ನೊಂದು ಕಡೆ ಬ್ಲೆರಿಮ್‌ ಡಿಜೆಮೈಲಿ 12 ಮೀ. ದೂರದಿಂದ ಗೋಲು ಹೊಡೆಯುವ ಒಳ್ಳೆಯ ಅವಕಾಶವನ್ನು ಕಳೆದುಕೊಂಡು ನಿರಾಶೆಗೊಳಗಾದರು.

No Comments

Leave A Comment