Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಬಡ್ಡಿ ಮಾಸ್ಟರ್ಸ್: ದ. ಕೊರಿಯಾವನ್ನು ಮಣಿಸಿದ ಭಾರತ ಫೈನಲ್ ಗೆ ಲಗ್ಗೆ

ದುಬೈ: : ದುಬೈನಲ್ಲಿ ನಡೆಯುತ್ತಿರುವ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತ ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದೆ.

ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ಕೊರಿಯಾ ವಿರುದ್ಧ 36-20 ಅಂತರದ ಜಯ ಸಾಧಿಸಿದೆ.

ಏತನ್ಮಧ್ಯೆ ಇರಾನ್-ಪಾಕಿಸ್ತಾನದ ನಡುವೆ ನಡೆದ ಇನ್ನೊಂದು ಪಂದ್ಯದಲ್ಲಿ ಇರಾನ್ ಪಾಕಿಸ್ತಾನ ವಿರುದ್ಧ 40-21 ಅಂತರದ ಗೆಲುವು ದಾಖಲಿಸಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದೆ.

ಈ ಮೂಲಕ  ಫೈನಲ್ಸ್ ನಲ್ಲಿ ಭಾರತ ಇರಾನ್ ತಂಡವನ್ನು ಎದುರಿಸಲಿದೆ. ಇತ್ತಂಡಗಳು ಉತ್ತಮ ಫಾರ್ಮ್ ಹೊಂದಿದ್ದು ಫೈನಲ್ಸ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

ಕನ್ನಡಿಗ ರಿಶಾಂಕ್ ದೇವಾಡಿಗ ರೈಡರ್ಸ್ ಗಳ ನಡುವೆ ಉತ್ತಮ ಶ್ರೇಯಾಂಕ ಗಳಿಸಿದ್ದಾರೆ.

No Comments

Leave A Comment