Log In
BREAKING NEWS >
Smriti Irani says writing on the wall for Rahul Gandhi...

ಭಾರೀ ಮಳೆ: ಆಗುಂಬೆ ಘಾಟ್ 7ನೇ ತಿರುವಿನಲ್ಲಿ ಭೂ ಕುಸಿತ, ಸಂಚಾರ ಅಸ್ತವ್ಯಸ್ಥ

ಶಿವಮೊಗ್ಗ: ಕಳೆದೆರಡು ದಿನಗಳಿಂದ ಸುರ್ರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕ ಕರಾವಳಿ, ಮಲೆನಾಡಿನ ಭಾಗದ ಜನ ಕಂಗಾಲಾಗಿದ್ದಾರೆ. ಮಳೆಯ ಕಾರಣ ಶಿವಮೊಗ್ಗ ಹಾಗೂ ಉಡುಪಿಯನ್ನು ಸಂಪರ್ಕಿಸುವ ಆಗುಂಬೆ ಘಾಟ್ ನಲ್ಲಿ ಭೂ ಕುಸಿತ ಉಂಟಾಗಿದೆ.

ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ್ದು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ. ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ಭೂ ಕುಸಿತದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಈ ಮಾರ್ಗದಲ್ಲಿ ಭಾರೀ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಇದೇ ರೀತಿ ಮಳೆ ಮುಂದುವರಿದಲ್ಲಿ 7ನೇ ತಿರುವಿನ ಮುಂಭಾಗಸ್ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಇಲ್ಲಿ ನಿರ್ಮಾಣವಾಗಿರುವ ತಡೆಗೋಡೆ ಸಹ ಅವೈಜ್ಞಾನಿಕವಾಗಿದೆ.  ಇದಾಗಲೇ ಹಲವು ವಾಹನಗಳು ಘಾಟ್ ಮೇಲಿನಿಂದ ಕೆಳಗುರುಳಿದೆ. ಅಲ್ಲದೆ ಘಾಟ್ ನ ಕೆಲವು ಕಡೆ ಹಾಕಿರುವ  ಸ್ಟೀಲ್ ತಡೆಗೋಡೆ ಸಹ ದುರ್ಬಲವಾಗಿದೆ. ಈ ಕುರಿತಂತೆ ಸ್ಥಳೀಯರು ಸಾಕಷ್ಟು ಬಾರಿ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ.

ಸಧ್ಯ ಗುಡ್ಡ ಕುಸಿದ ಸ್ಥಳದಲ್ಲಿ ಕೆಂಪು ರಿಬ್ಬನ್ ಪಟ್ಟಿ ಕಟ್ಟಿದ್ದು ಅಪಾಯದ ಸ್ಥಳ ಎಂದು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಲಾಗಿದೆ. ಈ ಘಾಟ್ ಮೂಲಕ ಸಂಚರಿಸುವಾಗ ಪ್ರಯಾಣಿಕರು  ಅತೀ ಜಾಗರೂಕತೆಯಿಂದ ಸಂಚರಿಸಬೇಕಾಗಿದೆ.

ಒಟ್ಟಾರೆ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಚಾರ್ಮಾಡಿ ಘಾಟ್ ನಲ್ಲಿ ಭೂ ಕುಸಿತವಾಗಿ ಭಾರೀ ಹಾನಿಯಾಗಿದ್ದ ನೆನಪು ಮಾಸುವ ಮುನ್ನವೇ ಆಗುಂಬೆ ಘಾಟ್ ನಲ್ಲಿ ಸಹ ಇದೇ ಪರಿಸ್ಥಿತಿ ಮರುಕಳಿಸಿರುವುದು ವಿಪರ್ಯಾಸವೇ ಸರಿ.

No Comments

Leave A Comment