Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಪಾದೂರು: ಹೆಚ್ಚುವರಿ ತೈಲ ಸಂಗ್ರಹಣಾಗಾರಕ್ಕೆ ಒಪ್ಪಿಗೆ

ಹೊಸದಿಲ್ಲಿ: ಉಡುಪಿಯ ಪಾದೂರಿನಲ್ಲಿ 2.5 ಲಕ್ಷ ಟನ್‌ ಸಾಮರ್ಥ್ಯ ಇರುವ ನೆಲದಡಿ ಭಾರತದ ವ್ಯೂಹಾತ್ಮಕ ತೈಲೋತ್ಪನ್ನಗಳ ಸಂಗ್ರಹಣಾ ನಿಯಮಿತ (ಐಎಸ್‌ಆರ್‌ಪಿಎಲ್‌)ದ ಹೆಚ್ಚುವರಿ ತೈಲ ಸಂಗ್ರಹಣಾಗಾರಕ್ಕೆ ಕೇಂದ್ರ ಸಂಪುಟ ಸಭೆ ಸಮ್ಮತಿಸಿದೆ. ಇದರ ಜತೆಗೆ ಒಡಿಶಾದ ಚಂಡೀ ಖೋಲ್‌ನಲ್ಲೂ 4.4 ಲಕ್ಷ ಟನ್‌ ಸಾಮರ್ಥ್ಯದ ತೈಲ ಸಂಗ್ರಹಣಾಗಾರಕ್ಕೂ ಒಪ್ಪಿಗೆ  ಸೂಚಿಸಿದೆ.

ದಿಲ್ಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಎರಡೂ ತೈಲ ಸಂಗ್ರಹಣಾಗಾರಗಳಿಂದಾಗಿ ದೇಶಕ್ಕೆ ಹೆಚ್ಚುವರಿ ಯಾಗಿ 12 ದಿನ ತೈಲ ಪೂರೈಕೆಗೆ ನೆರವಾಗಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರ ನಿರ್ಮಾಣಕ್ಕೆ ಮುಂದಾಗಿದೆ. ಒಟ್ಟು ಪಾದೂರು, ಮಂಗಳೂರು, ವಿಶಾಖಪಟ್ಟಣದಲ್ಲಿ ಸಂಗ್ರಹಣಾಗಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಮತ್ತೂಂದು ಮಹತ್ವದ ನಿರ್ಧಾರದಲ್ಲಿ ಕೇಂದ್ರ ಸಂಪುಟ ಸಭೆ ಪ್ರತಿ ಲೀಟರ್‌ ಇಥೆನಾಲ್‌ಗೆ 43.7 ರೂ. ಎಂದು ನಿಗದಿಪಡಿಸಲು ನಿರ್ಧರಿಸಿದೆ.

ಮಂಗಳೂರು: 15 ಲಕ್ಷ ಟನ್‌
ಪಾದೂರು: 2.5 ಲಕ್ಷ ಟನ್‌
ವಿಶಾಖಪಟ್ಟಣ: 1.33 ಲಕ್ಷ ಟನ್‌

No Comments

Leave A Comment