Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಮಲೇಷ್ಯಾ ಓಪನ್; ಸಿಂಧೂ ಶುಭಾರಂಭ

ಕೌಲಾಂಲಪುರ: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಹಾಗೂ ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧೂ, ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ವರ್ಲ್ಡ್ ಟೂರ್ ಸೂಪರ್ 750 ಟೂರ್ನಮೆಂಟ್‌ನಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಮೊದಲ ಸುತ್ತಿನ ಹೋರಾಟದಲ್ಲಿ ಜಪಾನ್‌ನ ಅಯಾ ಓಹೋರಿ ವಿರುದ್ಧ ಸಿಂಧೂ 26-24, 21-15ರ ಅಂತರದ ಕಠಿಣ ಗೆಲುವು ದಾಖಲಿಸಿದರು.

700,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೊಂದಿರುವ ಟೂರ್ನಿಯಲ್ಲಿ ವಿಶ್ವ ನಂ.14 ರ‍್ಯಾಂಕ್‌ ಆಟಗಾರ್ತಿ ವಿರುದ್ಧ ಸ್ವಲ್ಪ ತಡಕಾಡಿದರೂ ಕೊನೆಗೂ ಗೆಲುವಿನ ನಗೆ ಬೀರಿದರು.

ಗಾಯದಿಂದಾಗಿ ಪುಶಶ್ಚೇತನ ಹಂತದಲ್ಲಿದ್ದ ಸಿಂಧೂ ಉಬೆರ್ ಕಪ್ ಫೈನಲ್ಸ್‌ನಿಂದ ಹಿಂದೆ ಸರಿದಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಸಾಗಿದ ಕಾಮನ್‌ವೆಲ್ತ್ ಗೇಮ್ಸ್‌‌ನಲ್ಲಿ ಭಾರತದವರೇ ಆದ ಸೈನಾ ನೆಹ್ವಾಲ್ ವಿರುದ್ದ ಫೈನಲ್‌ನಲ್ಲಿ ಸೋಲೊಪ್ಪಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.


 

No Comments

Leave A Comment