Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ನಾಸಿಕ್ ಬಳಿ ಸುಖೋಯ್ ವಿಮಾನ ಅಪಘಾತ : ಪೈಲಟ್ ಗಳು ಸುರಕ್ಷಿತ

ನಾಸಿಕ್ : ಮಹಾರಾಷ್ಟ್ರದ ನಾಸಿಕ್ ಬಳಿ ಇಂದು ಬೆಳಿಗ್ಗೆ ಸುಖೋಯ್  ವಿಮಾನ ಅಪಘಾತಕ್ಕೀಡಾಗಿದೆ.  ಆದರೆ, ಯಾವುದೇ ಪ್ರಾಣಪಾಯವಾಗಿಲ್ಲ.

ವಿಮಾನ ಭೂಮಿಗೆ ಸ್ಪರ್ಶಿಸುವ ಮುನ್ನವೇ ಇಬ್ಬರು ಪೈಲಟ್ ಗಳು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹೆಚ್ ಎಎಲ್  ಉಪ ಉತ್ಪಾದಿತ   ಸುಖೋಯ್ -30 ಎಂಕೆಐ ಅವಳಿ ಬಹುಹಂತದ ವಿಮಾನ ಹಾರಾಟ ನಡೆಸುತ್ತಿದ್ದಾಗ   ನಾಸಿಕ್ ನಿಂದ 25 ಕಿಲೋಮೀಟರ್ ದೂರದಲ್ಲಿರುವ  ಪಿಂಪಾಲ್ಗಾನ್  ವಾವಿ ತುಸಿ ಗ್ರಾಮದ ಬಳಿ ಭೂಮಿಗೆ ಅಪ್ಪಳಿಸಿದ್ದು,  ಅವಶೇಷಗಳು ಬಿದ್ದಿವೆ ಎಂದು  ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ 11-05 ರ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ 11-15ಕ್ಕೆ ಪಿಂಪ್ಲಾಗನ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ  ಯುದ್ದವಿಮಾನವನ್ನು ರಷ್ಯಾದ ಸುಖೋಯ್ ಅಭಿವೃದ್ದಿಪಡಿಸಿದ್ದು, ಎಚ್ ಎಎಲ್ ಅನುಮತಿಯಿಂದ ತಯಾರಿಸಲಾಗಿತ್ತು. ನಾಸಿಕ್ ಬಳಿಯ ಹೆಚ್ ಎಎಲ್ ವಾಯುನಿಲ್ದಾಣದಿಂದ ಟೆಕ್ ಆಪ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.ಸುದ್ದಿ ತಿಳಿದ ತಕ್ಷಣ ಒಜಹಾರ್ ವಾಯುನೆಲೆಯ ವಾಯುಪಡೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾಗಿ ಪೊಲೀಸರು ಹೇಳಿದ್ದಾರೆ. 

ಇದೇ ತಿಂಗಳು ಗುಜರಾತ್ ನ ಕಚ್ ಪ್ರದೇಶದ ಮುಂದ್ರಾ ಜಿಲ್ಲೆಯಲ್ಲಿ ವಾಯುಪಡೆಯ ಜಾಗ್ವರ್ ಯುದ್ದ ವಿಮಾನ ಅಪಘಾತವಾಗಿತ್ತು.  ಕಳೆದ ವರ್ಷ ಮೇ ತಿಂಗಳಲ್ಲಿ  ಚೀನಾದ  ಗಡಿ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ  ಸುಖೋಯ್ ವಿಮಾನ ಅಪಾಘತಕ್ಕೀಡಾಗಿತ್ತು. ಈ ಅಪಘಾತಗಳ ಬಗ್ಗೆ  ತನಿಖೆಗೆ ವಾಯುಪಡೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.

No Comments

Leave A Comment