Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಜಾಗತಿಕ ವ್ಯಾಪಾರದಲ್ಲಿ ಭಾರತದ ಕೊಡುಗೆ ದುಪ್ಪಟ್ಟುಗೊಳಿಸಲು ಕ್ರಮ ಎರಡಂಕಿ ವೃದ್ಧಿ: ಮೋದಿ ನಿರೀಕ್ಷೆ

ನವದೆಹಲಿ: ‘ಭಾರತವು ₹ 335 ಲಕ್ಷ ಕೋಟಿ ಆರ್ಥಿಕತೆಯ ದೇಶಗಳ ಸಾಲಿಗೆ ಸೇರಲು ಆರ್ಥಿಕ ವೃದ್ಧಿ ದರವು (ಜಿಡಿಪಿ) ಎರಡಂಕಿ ದಾಟಬೇಕಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

‘2017–18ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ವೃದ್ಧಿ ದರ ಶೇ 7.7ರಷ್ಟಾಗಿದೆ. ಶೇ 7 ರಿಂದ 8ರ ವೃದ್ಧಿ ದರದ ಆಚೆ ನಾವೀಗ ಆಲೋಚಿಸಬೇಕಾಗಿದ್ದು, ಎರಡಂಕಿಯ ವೃದ್ಧಿ ದರ ಸಾಧಿಸಲು ಗುರಿ ನಿಗದಿಪಡಿಸಬೇಕಾಗಿದೆ.

‘ಭಾರತವು ಯಾವಾಗ ₹ 335 ಲಕ್ಷ ಕೋಟಿ ಆರ್ಥಿಕತೆಯ ಕ್ಲಬ್‌ಗೆ ಸೇರ್ಪಡೆ ಆಗಲಿದೆ ಎನ್ನುವುದನ್ನು ಜಾಗತಿಕ ಸಮುದಾಯವು ಎದುರು ನೋಡುತ್ತಿದೆ’ ಎಂದು ಹೇಳಿದ್ದಾರೆ.

‘ಜಾಗತಿಕ ವ್ಯಾಪಾರದಲ್ಲಿ ಭಾರತದ ಕೊಡುಗೆಯನ್ನು ದುಪ್ಪಟ್ಟುಗೊಳಿಸಿ ಶೇ 3.4ರಷ್ಟಕ್ಕೆ ಹೆಚ್ಚಿಸಲು ಸರ್ಕಾರ ಗುರಿ ನಿಗದಿಪಡಿಸಿದೆ.  ತೈಲದ ವಿಷಯದಲ್ಲಿ ದೇಶಿ ಉತ್ಪಾದನೆ ಹೆಚ್ಚಿಸಿ ಆಮದು ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ತಗ್ಗಿಸಬೇಕಾಗಿದೆ.

‘ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶಿ ಆರ್ಥಿಕತೆಯು- ಅಡ್ಡಿಪಡಿಸುವ, ವಿಳಂಬ ಮಾಡುವ ಮತ್ತು ತಪ್ಪು ಮಾರ್ಗದರ್ಶನ ಮಾಡುವ ಸಂಸ್ಕೃತಿಯಿಂದ ದೂರ ಸರಿದಿದೆ. ಜಿಎಸ್‌ಟಿ ಜಾರಿಯಿಂದ ವಹಿವಾಟು ಸುಗಮಗೊಂಡಿರುವುದರ ಜತೆಗೆ, ತೆರಿಗೆ ವ್ಯಾಪ್ತಿ ಹಿಗ್ಗಿದೆ. 54 ಲಕ್ಷ ಹೊಸ ತೆರಿಗೆದಾರರು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆಯು ಒಂದು ಕೋಟಿ ದಾಟಿದೆ. ಜಿಎಸ್‌ಟಿ ಜಾರಿ ಮುನ್ನ ಈ ಸಂಖ್ಯೆ 60 ಲಕ್ಷದಷ್ಟಿತ್ತು.

‘ಎನ್‌ಡಿಎ ಸರ್ಕಾರವು ನಾಲ್ಕು ವರ್ಷಗಳಲ್ಲಿ ಉದ್ದಿಮೆ – ವಹಿವಾಟುಗಳನ್ನು ಸುಲಲಿತವಾಗಿ ಆರಂಭಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಚಾಲ್ತಿ ಖಾತೆ ಕೊರತೆಯನ್ನು ನಿಗದಿತ ಮಿತಿ ಒಳಗೆ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ವಿದೇಶಿ ವಿನಿಮಯ ಮೀಸಲು ಸಂಗ್ರಹವು ದಾಖಲೆ ಮಟ್ಟದಲ್ಲಿ ಇದೆ’ ಎಂದರು.

ಹಣಕಾಸು ಸಚಿವಾಲಯದ ಹೊಸ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

No Comments

Leave A Comment