Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಬೆಂಗಳೂರು: ಪತ್ನಿಗೆ ಗುಂಡಿಟ್ಟು ಕೊಂಡು 3 ಮಕ್ಕಳೊಂದಿಗೆ ಉದ್ಯಮಿ ಪರಾರಿ

ಬೆಂಗಳೂರು: ಉದ್ಯಮಿಯೊಬ್ಬ ತನ್ನ ಹೆಂಡತಿ ಎದೆಗೆ ಗುಂಡು ಹಾರಿಸಿಕೊಂದು ಮೂವರು ಮಕ್ಕಳೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಯನಗರದ ನಾಲ್ಕನೆ ಬ್ಲಾಕ್‍ನಲ್ಲಿ ಕಳೆದ ರಾತ್ರಿ ಉದ್ಯಮಿ ಗಣೇಶ್ ಎಂಬಾತ ತನ್ನ ಪತ್ನಿ ಸಹನಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಕನಕಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ರೆಸಾರ್ಟ್ ಮಾಲೀಕನಾಗಿರುವ ಆರೋಪಿ‌ ಗಣೇಶ್, ರಿಯಲ್ ಎಸ್ಟೇಟ್ ಮತ್ತು ಸಕಲೇಶಪುರದಲ್ಲಿ ಬಿಸಿನೆಸ್ ಹೊಂದಿದ್ದ. ಹಣಕಾಸು ವಿಚಾರವಾಗಿ ಕ್ಯಾತೆ ತೆಗೆದು ಪತ್ನಿ ‌ಸಹನಾ ಎದೆಗೆ ಒಂದು ಸುತ್ತು ಗುಂಡು ಹಾರಿಸಿ‌ ಹತ್ಯೆ ಮಾಡಿದ್ದಾನೆ.

ಗಣೇಶ್ ಹಾಗೂ ಸಹನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗುವನ್ನು ಇತ್ತೀಚೆಗೆ ದತ್ತು ಪಡೆದಿದ್ದರು.

ಆರೋಪಿ ಗಣೇಶ್​ ಪತ್ತೆಗಾಗಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದು, ಆರೋಪಿ ಬಳಿಯಿದ್ದ ವೆಪನ್​ ಲೈಸೆನ್ಸ್  ಕುರಿತಂತೆ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ವಿಧಿವ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

No Comments

Leave A Comment