Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಮುಂಬಯಿ ಮಲಾಡ್‌ ಇಂಡಸ್ಟ್ರಿಯಲ್‌ ಎಸ್ಟೇಟ್‌ನಲ್ಲಿ ಬೆಂಕಿ ದುರಂತ

ಮುಂಬಯಿ : ಮುಂಬಯಿಯ ಮಲಾಡ್‌ನ‌ಲ್ಲಿನ ಇಂಡಸ್ಟ್ರಿಯಲ್‌ ಎಸ್ಟೇಟ್‌ನಲ್ಲಿ ಇಂದು ಗುರುವಾರ ಬೆಳಗ್ಗೆ ಮಧ್ಯಮ ಮಟ್ಟದ ಬೆಂಕಿ ಅನಾಹುತ ಸಂಭವಿಸಿತು. ಬೆಂಕಿ ನಂದಿಸುವ ಕಾರ್ಯಾಚರಣೆಗೆ ನಾಲ್ಕು ನೀರಿನ ಟ್ಯಾಂಕರ್‌ಗಳನ್ನು ಮತ್ತು ನಾಲ್ಕು ಅಗ್ನಿ ಶಾಮಕಗಳನ್ನು ಬಳಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ಥಾಣೆಯ ಮುಂಬ್ರಾ ಕೌಸಾದಲ್ಲಿನ  ರಹೀಮಿಯಾ ಮಸೀದಿ ಸಮೀಪದ ಗೋದಾಮಿಯಲ್ಲಿ ನಿನ್ನೆ ಬುಧವಾರ ರಾತ್ರಿ ಇನ್ನೊಂದು ಅಗ್ನಿ ಅವಘಡ ಸಂಭವಿಸಿತ್ತು. 

ಇದರಿಂದಾಗಿ ಸುಮಾರು 10 ಗೋದಾಮುಗಳು ಬೆಂಕಿಗೆ ಆಹುತಿಯಾದವು. ಎರಡು ಅಗ್ನಿ ಶಾಮಕಗಳನ್ನು ಹಾಗೂ ಒಂದು ರಕ್ಷಣಾ ಕಾರ್ಯಾಚರಣೆ ವಾಹನವನ್ನು ಮತ್ತು ನಾಲ್ಕು ನೀರಿನ ಟ್ಯಾಂಕರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಪೊಲೀಸರು ಮತ್ತು ಪ್ರಾದೇಶಿಕ ವಿಕೋಪ ವ್ಯವಸ್ಥಾಪನ ವಿಭಾಗದವರು ಸ್ಥಳದಲ್ಲಿ ಇದ್ದರು.

No Comments

Leave A Comment