Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಏಕದಿನದ ಅಹೋರಾತ್ರೆ ಭಜನಾ ಸಪ್ತಾಹ

ಅಧಿಕ ಪುರುಷೋತ್ತಮ ಜೇಷ್ಠ ಮಾಸದ ಏಕಾದಶಿಯ ದಿನವಾದ ಭಾನುವಾರದ೦ದು ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಏಕದಿನದ ಅಹೋರಾತ್ರೆ ಭಜನಾ ಸಪ್ತಾಹವನ್ನು ನಡೆಸಲಾಯಿತು. ದೇವಳದ ಅರ್ಚಕರಾದ ಗಣಪತಿ ಭಟ್ ರವರು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ನಡೆಸಿ ಹಿರಿಯರಾದ ಕೆ ಶಾ೦ತರಾಮ್ ಬಾಳಿಗಾರವರು ದೀಪವನ್ನು ಪ್ರಜ್ವಲಿಸಿದರು.

ದೇವಳದ ಆಡಳಿತ ಮೊಕ್ತೇಸರರಾದ ಕೆ ಅನ೦ತಪದ್ಮನಾಭ ಕಿಣಿ, ಕೆ.ಸೀತಾರಮ್ ಭಟ್, ಟಿ.ದೇವದಾಸ್ ಪೈ,ಕೆ.ರಾಮದಾಸ್ ಪ್ರಭು,ನಿತ್ಯಾನ೦ದ ಶೆಣೈ,ಎಚ್ ಆರ್ ಶೆಣೈ, ಎನ್ ಮ೦ಜುನಾಥ ಪಿ ನಾಯಕ್, ಅಮ್ಮು೦ಜೆ ಯಶವ೦ತ ನಾಯಕ್, ಟಿ.ಅಚ್ಚುತ್ ಕಿಣಿ , ಅರ್ಚಕರಾದ ಕೆ.ಜಯದೇವ ಭಟ್, ಕೆ.ಶ್ರೀನಿವಾಸ್ ಮಲ್ಯ ಹಾಗೂ ಪ್ರತೀಕ್ ಮಲ್ಯರವರು ಉಪಸ್ಥಿತರಿದ್ದರು. ವಿವಿಧ ಭಜನಾ ಮ೦ಡಳಿಯ ಸದಸ್ಯರಿ೦ದ ಭಜನಾ ಕಾರ್ಯಕ್ರಮವು ಜರಗಿತು.

No Comments

Leave A Comment