Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ಚಂಡಮಾರುತಕ್ಕೆ ಐವರ ಬಲಿ

ಮೊರದಾಬಾದ್: ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬೀಸುತ್ತಿರುವ ಚಂಡ ಮಾರುತಕ್ಕೆ ಸುಮಾರು  ಐದು ಮಂದಿ ಬಲಿಯಾಗಿದ್ದು , ಆರು ಮಂದಿ ಗಾಯಗೊಂಡಿದ್ದಾರೆ.
 
ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಇಬ್ಬರು ಹಾಗೂ ಉತ್ತರಾಖಂಡ್ ನ ಮಂಡಲ್ ನಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಕೆಲ ಪ್ರದೇಶಗಳಲ್ಲಿ ಮರ, ವಿದ್ಯುತ್ ಕಂಬ ಮುರಿದು ಬಿದ್ದಿವೆ.
ಗುರುವಾರ ಬೆಳಗ್ಗೆ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಸೂಚನೆ ನೀಡಿತ್ತು. ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಪ್ರಬಲವಾಗ ಶೀತಗಾಳಿ ಬೀಸಲಿದೆ ಎಂದು ಹೇಳಿತ್ತು,

 
ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಂಡಮಾರುತಕ್ಕೆ 30 ಮಂದಿ ಬಲಿಯಾಗಿದ್ದಾರೆ.
No Comments

Leave A Comment